Job Description: ➤ ಕೆನಡಾ ಗಡಿ ಸೇವಾ ಸಂಸ್ಥೆ (CBSA - Canada Border Services Agency) ಇತ್ತೀಚೆಗೆ ಬಿಡುಗಡೆ ಮಾಡಿದ ಅಧಿಕೃತ ವರದಿಯ ಪ್ರಕಾರ, 2026ರ ಮೊದಲಾರ್ಧದಲ್ಲೇ (ಜನವರಿಯಿಂದ ಜೂನ್) 3,323 ಭಾರತೀಯ ಪ್ರಜೆಗಳನ್ನು ಕೆನಡಾದಿಂದ ವಾಪಸ್ ಕಳುಹಿಸಲಾಗಿದೆ. ಕಳೆದ 2025ರ ಇಡೀ ವರ್ಷದಲ್ಲಿ ಒಟ್ಟು 3,779 ಭಾರತೀಯರು ಗಡಿಪಾರಾಗಿದ್ದರು. ಆದರೆ, 2026ರ ಮೊದಲ ಆರು ತಿಂಗಳ ಸಂಖ್ಯೆಯೇ ಕಳೆದ ವರ್ಷದ ಒಟ್ಟು ಸಂಖ್ಯೆಯ ಶೇಕಡಾ 88 ರಷ್ಟನ್ನು ತಲುಪಿದ್ದು, ಈ ವರ್ಷದ ಅಂತ್ಯಕ್ಕೆ ಇದು ಸಾರ್ವಕಾಲಿಕ ದಾಖಲೆ ಬರೆಯುವ ಸಾಧ್ಯತೆಯಿದೆ.➤ ಕಳೆದ ಐದು ವರ್ಷಗಳಿಂದ ಕೆನಡಾದ ಗಡಿಪಾರು ಪಟ್ಟಿಯಲ್ಲಿ ಮೆಕ್ಸಿಕೋ ಪ್ರಥಮ ಸ್ಥಾನದಲ್ಲಿತ್ತು. ಆದರೆ 2026ರಲ್ಲಿ ಭಾರತವು ಮೆಕ್ಸಿಕೋ (1,573 ಗಡಿಪಾರು) ಅನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.➤ ವರ್ಷವಾರು ಭಾರತೀಯರ ಗಡಿಪಾರು ಅಂಕಿ-ಅಂಶಗಳ ಏರಿಕೆ (2021 - 2026):2021: 6032022: 7862023: 1,1322024: 2,0042025: 3,7792026 (ಮೊದಲ 6 ತಿಂಗಳು): 3,323➤ ಕೆನಡಾ ಸರ್ಕಾರವು ತನ್ನ ವಲಸೆ ನಿಯಮಗಳನ್ನು ಬಿಗಿಗೊಳಿಸಿರುವುದರಿಂದ, ವೀಸಾ ನಿಯಮಗಳ ಉಲ್ಲಂಘನೆ, ಅವಧಿ ಮುಕ್ತಾಯ, ನಕಲಿ ದಾಖಲೆಗಳು, ಆಶ್ರಯ ಅರ್ಜಿಗಳ ತಿರಸ್ಕಾರ ಹಾಗೂ ಸಂಘಟಿತ ಅಪರಾಧ ಜಾಲಗಳ ದುರುಪಯೋಗದ ಕಾರಣಗಳಿಂದಾಗಿ ಭಾರತೀಯರ ಗಡಿಪಾರು ಹೆಚ್ಚಾಗುತ್ತಿದೆ. ➤ ಕೆನಡಾದ ವಲಸೆ ಗಡಿಪಾರು ಆದೇಶಗಳ ವಿಧಗಳು: ನಿರ್ಗಮನ ಆದೇಶ (Departure Order): ವ್ಯಕ್ತಿಯು 30 ದಿನಗಳೊಳಗೆ ಸ್ವಯಂಪ್ರೇರಿತನಾಗಿ ಕೆನಡಾವನ್ನು ತೊರೆಯಬೇಕು. 30 ದಿನಗಳೊಳಗೆ ತೊರೆಯದಿದ್ದರೆ ಅದು ಸ್ವಯಂಚಾಲಿತವಾಗಿ 'ಡೆಪೋರ್ಟೇಶನ್ ಆರ್ಡರ್' ಆಗಿ ಬದಲಾಗುತ್ತದೆ. ವಿನಾಯಿತಿ/ನಿಷೇಧ ಆದೇಶ (Exclusion Order): ಈ ಆದೇಶ ಪಡೆದ ವ್ಯಕ್ತಿಯು ನಿರ್ದಿಷ್ಟ ಅವಧಿಗೆ (ಸಾಮಾನ್ಯವಾಗಿ 1 ರಿಂದ 5 ವರ್ಷಗಳು) ಕೆನಡಾಕ್ಕೆ ಮರುಪ್ರವೇಶಿಸುವಂತಿಲ್ಲ. ಗಡಿಪಾರು ಆದೇಶ (Deportation Order): ಕೆನಡಾಕ್ಕೆ ಶಾಶ್ವತವಾಗಿ ಪ್ರವೇಶಿಸುವುದನ್ನು ನಿಷೇಧಿಸಲಾಗುತ್ತದೆ. ಸರ್ಕಾರದಿಂದ ಲಿಖಿತ ಮರು-ಅನುಮತಿ (ARC) ಪಡೆಯದೇ ಪ್ರವೇಶಿಸಲು ಸಾಧ್ಯವಿಲ್ಲ.