➤ ರಾಷ್ಟ್ರಧ್ವಜದ ಇತಿಹಾಸ ಮತ್ತು ವಿಕಾಸ:
- ಪಿಂಗಳಿ ವೆಂಕಯ್ಯ ಅವರ ವಿನ್ಯಾಸ:
- ಭಾರತದ ಪ್ರಸ್ತುತ ರಾಷ್ಟ್ರಧ್ವಜದ ಮೂಲ ರೂಪುರೇಷೆಯನ್ನು ಆಂಧ್ರಪ್ರದೇಶದ ಪಿಂಗಳಿ ವೆಂಕಯ್ಯ (Pingali Venkayya) ಅವರು 1921 ರಲ್ಲಿ ವಿನ್ಯಾಸಗೊಳಿಸಿದರು.
- ಆರಂಭಿಕ ವಿನ್ಯಾಸದಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳಿದ್ದವು. ನಂತರ ಮಹಾತ್ಮಾ ಗಾಂಧೀಜಿಯವರ ಸಲಹೆಯಂತೆ ಶಾಂತಿಯ ಸಂಕೇತವಾಗಿ ಬಿಳಿ ಬಣ್ಣ ಮತ್ತು ಪ್ರಗತಿಯ ಸಂಕೇತವಾಗಿ ಚರಕವನ್ನು ಸೇರಿಸಲಾಯಿತು.
- ಸ್ವರಾಜ್ ಧ್ವಜ (1931):
- 1931 ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಮಧ್ಯೆ ಚರಕವಿರುವ 'ಸ್ವರಾಜ್ ಧ್ವಜ'ವನ್ನು ಅಧಿಕೃತವಾಗಿ ಬಳಸಲು ನಿರ್ಧರಿಸಲಾಯಿತು.
- ಅಂತಿಮ ರೂಪಾಂತರ (1947):
- 1947 ಜುಲೈ 22 ರಂದು ಸಂವಿಧಾನ ಸಭೆಯು ಈ ಧ್ವಜವನ್ನು ಸ್ವೀಕರಿಸಿದಾಗ, ಚರಕದ ಬದಲಿಗೆ 24 ಕಡ್ಡಿಗಳಿರುವ ಅಶೋಕ ಚಕ್ರವನ್ನು (Navy Blue Ashoka Chakra) ಸೇರಿಸಲಾಯಿತು.
ಕೇಸರಿ (Saffron): ಧೈರ್ಯ, ತ್ಯಾಗ ಮತ್ತು ದೇಶಕ್ಕಾಗಿ ಬಲಿದಾನದ ಸಂಕೇತ
ಬಿಳಿ (White): ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತ
ಹಸಿರು (Green): ನಂಬಿಕೆ, ಪ್ರಗತಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತ
ಅಶೋಕ ಚಕ್ರ (Ashoka Chakra): ಚಲನೆ, ಧರ್ಮ ಮತ್ತು ಸತತ ಪ್ರಗತಿಯ ಸಂಕೇತ. ಇದರಲ್ಲಿ 24 ಕಡ್ಡಿಗಳು (Spokes) ಇವೆ.
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ