Job Description: ➤ ಭಾರತದ ಪ್ರಮುಖ ರಕ್ಷಣೆ ಮತ್ತು ಏರೋಸ್ಪೇಸ್ ಉತ್ಪಾದನಾ ಸಂಸ್ಥೆಯಾದ ರಘು ವಂಶಿ ಏರೋಸ್ಪೇಸ್ ಗ್ರೂಪ್ (Raghu Vamsi Aerospace Group) ತೆಲಂಗಾಣದಲ್ಲಿ ಬೃಹತ್ ಸೂಪರ್ ಅಲಾಲಿ (Superalloy) ತಯಾರಿಕಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ. ಯುಕೆ (UK) ಯಲ್ಲಿ ನಡೆದ ಪ್ರಸಿದ್ಧ ಫಾರ್ನ್‌ಬರೋ ಇಂಟರ್‌ನ್ಯಾಷನಲ್ ಏರ್‌ಶೋ (Farnborough International Airshow) ನಲ್ಲಿ ಸಂಸ್ಥೆಯು ಈ ₹600 ಕೋಟಿ ಹೂಡಿಕೆಯ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದೆ. ➤ ಯೋಜನೆಯ ಮುಖ್ಯ ವಿವರಗಳು: ಹೂಡಿಕೆ ಮತ್ತು ಜಾಗ: ತೆಲಂಗಾಣದ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹಾರ್ಡ್‌ವೇರ್ ಪಾರ್ಕ್ (Hardware Park) ನಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಈ ಘಟಕ ನಿರ್ಮಾಣವಾಗಲಿದೆ. ಉತ್ಪಾದನಾ ಸಾಮರ್ಥ್ಯ: ಈ ಸಂಯೋಜಿತ (Integrated) ಘಟಕವು ವಾರ್ಷಿಕವಾಗಿ ಸುಮಾರು 5,000 ಟನ್ ಸೂಪರ್ ಅಲಾಲಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ವಾಣಿಜ್ಯಿಕ ಉತ್ಪಾದನೆ ಪ್ರಾರಂಭ: ಈ ಪ್ಲಾಂಟ್‌ನ ವಾಣಿಜ್ಯಿಕ ಉತ್ಪಾದನೆಯು ಜನವರಿ 2028 ರಿಂದ ಆರಂಭಗೊಳ್ಳುವ ಗುರಿ ಹೊಂದಲಾಗಿದೆ. ಯೋಜನೆಯ ನೇತೃತ್ವ: 'ಮಿಶ್ರಾ ಧಾತು ನಿಗಮ್ ಲಿಮಿಟೆಡ್' (MIDHANI) ಸಂಸ್ಥೆಯ ಮಾಜಿ ಸಿಎಂಡಿ ಡಾ. ಎಸ್. ಕೆ. ಝಾ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಯ ನೇತೃತ್ವ ವಹಿಸಲಿದ್ದಾರೆ. ➤ ಸೂಪರ್ ಅಲಾಲಿ (Superalloy): ಇದು ಅತ್ಯಂತ ಹೆಚ್ಚಿನ ತಾಪಮಾನ, ಹೆಚ್ಚಿನ ಒತ್ತಡ ಮತ್ತು ತುಕ್ಕು ಹಿಡಿಯುವಿಕೆಯನ್ನು (Corrosion) ತಡೆದುಕೊಳ್ಳುವ ವಿಶೇಷ ಸಾಮರ್ಥ್ಯವಿರುವ ಲೋಹದ ಮಿಶ್ರಣವಾಗಿದೆ (ಮಿಶ್ರಲೋಹ). ಬಳಕೆ: ನಿಕಲ್ ಆಧಾರಿತ (Nickel-based) ಈ ಸೂಪರ್ ಅಲಾಲಿಗಳನ್ನು ವಿಮಾನಗಳ ಜೆಟ್ ಎಂಜಿನ್‌ಗಳು, ಬಾಹ್ಯಾಕಾಶ ನೌಕೆಗಳು, ರಕ್ಷಣಾ ಉಪಕರಣಗಳು, ಗ್ಯಾಸ್ ಟರ್ಬೈನ್‌ಗಳು, ಪರಮಾಣು ಶಕ್ತಿ ಘಟಕಗಳು ಮತ್ತು ಹೈಡ್ರೋಜನ್ ತಂತ್ರಜ್ಞಾನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆಮದು ನಿರ್ಬಂಧ: ಪ್ರಸ್ತುತ ಭಾರತವು ನಿಕಲ್ ಸೂಪರ್ ಅಲಾಲಿಗಳಿಗಾಗಿ ವಿದೇಶಿ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಘಟಕ ಸ್ಥಾಪನೆಯಿಂದ ದೇಶೀಯವಾಗಿ ಉನ್ನತ ಮಟ್ಟದ ಲೋಹಗಳು ಲಭ್ಯವಾಗಲಿದ್ದು, ಆಮದು ಪ್ರಮಾಣ ಗಣನೀಯವಾಗಿ ತಗ್ಗಲಿದೆ. ➤ ರಘು ವಂಶಿ ಏರೋಸ್ಪೇಸ್: ಹೈದರಾಬಾದ್ ಮೂಲದ ರಘು ವಂಶಿ ಏರೋಸ್ಪೇಸ್ ಸಂಸ್ಥೆಯು ಪ್ರಮುಖ ಜಾಗತಿಕ ಕಂಪನಿಗಳಾದ GE Aerospace, Pratt & Whitney, Honeywell, Safran, Collins Aerospace ಮುಂತಾದ ಜಾಗತಿಕ ಸಂಸ್ಥೆಗಳಿಗೆ ಏರೋ-ಎಂಜಿನ್ ಭಾಗಗಳನ್ನು ಪೂರೈಸುತ್ತದೆ. ಇತ್ತೀಚೆಗಷ್ಟೇ ಸಂಸ್ಥೆಯು ನಾರ್ವೆಸ್ಟ್ ಮತ್ತು ಸ್ಕೇಗೆನ್ ಅಸೆಟ್ ಮ್ಯಾನೇಜ್‌ಮೆಂಟ್ ನೇತೃತ್ವದಲ್ಲಿ 40 ಮಿಲಿಯನ್ ಡಾಲರ್ ($40 Million - ಸುಮಾರು ₹400 ಕೋಟಿ) ಹೂಡಿಕೆಯನ್ನು ಕೂಡ ಸಂಗ್ರಹಿಸಿದೆ. ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ