Job Description: ➤ ತಮಿಳುನಾಡಿನ ಕಡಲೂರು ಜಿಲ್ಲೆಯ ‘ಕಿಲೈ’ (Killai) ಗ್ರಾಮವು ರಾಜ್ಯದ ಮೊದಲ ಸಂಪೂರ್ಣ ಕಾರ್ಯನಿರತ 'ಹವಾಮಾನ ಸ್ಥಿತಿಸ್ಥಾಪಕ ಗ್ರಾಮ' (Climate-Resilient Village - CRV) ಆಗಿ ಹೊರಹೊಮ್ಮಿದೆ.➤ ತಮಿಳುನಾಡು ಸರಕಾರದ ‘ತಮಿಳುನಾಡು ಹವಾಮಾನ ಬದಲಾವಣೆ ಮಿಷನ್’ (Tamil Nadu Climate Change Mission - TNCCM) ಅಡಿಯಲ್ಲಿ ಕಡಲೂರು ಜಿಲ್ಲೆಯ ಪಿಚಾವರಂ ಬಳಿಯ ಕಿಲೈ (Killai) ಪಟ್ಟಣ ಪಂಚಾಯತಿಯನ್ನು ಮಾದರಿ ಹವಾಮಾನ ಸ್ಥಿತಿಸ್ಥಾಪಕ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗಿದೆ. ಕರಾವಳಿ ಪ್ರದೇಶಗಳು ಎದುರಿಸುತ್ತಿರುವ ಚಂಡಮಾರುತ, ಸಮುದ್ರ ಮಟ್ಟ ಏರಿಕೆ, ಉಪ್ಪು ನೀರು ನುಗ್ಗುವಿಕೆ ಮತ್ತು ಕರಾವಳಿ ಸವೆತದಂತಹ ಸವಾಲುಗಳನ್ನು ಎದುರಿಸಲು ನೈಸರ್ಗಿಕ ಪರಿಸರ ವ್ಯವಸ್ಥೆಯ ಮರುಸ್ಥಾಪನೆ (Ecosystem Restoration) ಮತ್ತು ನವೀಕರಿಸಬಹುದಾದ ಇಂಧನ (Renewable Energy) ಬಳಕೆಯ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ➤ ಕಿಲೈನಲ್ಲಿ ಕೈಗೊಳ್ಳಲಾದ ಪ್ರಮುಖ ಅಭಿವೃದ್ಧಿ ಕಾರ್ಯಗಳು: ಬಕಿಂಗ್‌ಹ್ಯಾಮ್ ಕಾಲುವೆಯ ಪುನರುಜ್ಜೀವನ (Buckingham Canal Rejuvenation): ಕಿಲೈ ವ್ಯಾಪ್ತಿಯಲ್ಲಿ ಹಾದುಹೋಗುವ ಐತಿಹಾಸಿಕ 3 ಕಿ.ಮೀ ಉದ್ದದ ಬಕಿಂಗ್‌ಹ್ಯಾಮ್ ಕಾಲುವೆಯನ್ನು ಹೂಳೆತ್ತಿ (Desilting) ಶುದ್ಧೀಕರಿಸಲಾಗಿದೆ. ಸುಮಾರು 750 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ವಿದೇಶಿ ಆಕ್ರಮಣಕಾರಿ ಸಸ್ಯ ಪ್ರಭೇದವಾದ Prosopis juliflora (ಸೀಮೆ ಜಾಲಿ) ಅನ್ನು ತೆರವುಗೊಳಿಸಲಾಗಿದೆ. ಸ್ಥಳೀಯ ಮ್ಯಾಂಗ್ರೋವ್ ತಳಿಗಳ ರಕ್ಷಣೆ (Mangrove Plantation): ಕಾಲುವೆಯ ದಂಡೆಯಲ್ಲಿ ಕರಾವಳಿ ಸವೆತ ತಡೆಯಲು ಹಾಗೂ ಜೀವವೈವಿಧ್ಯ ಹೆಚ್ಚಿಸಲು Rhizophora mucronata, Avicennia marina ಸೇರಿದಂತೆ 3,000ಕ್ಕೂ ಹೆಚ್ಚು ಸ್ಥಳೀಯ ಚೌಗು ಸಸ್ಯಗಳನ್ನು (Native Mangrove Saplings) ನೆಡಲಾಗಿದೆ. ಹಸಿರು ಇಂಧನ ಮತ್ತು ಸೌರಶಕ್ತಿ ಬಳಕೆ (Clean Energy): ಪಿಚಾವರಂ ಬೋಟ್ ಹೌಸ್‌ನಲ್ಲಿ ಪ್ರವಾಸಿಗರಿಗೆ ಸೌರಶಕ್ತಿ ಚಾಲಿತ ಇ-ಬೋಟ್‌ಗಳನ್ನು (Solar e-boats) ಪರಿಚಯಿಸಲಾಗಿದೆ. ಸರಕಾರಿ ಕಚೇರಿಗಳು, ಪಂಚಾಯತ್ ಕಚೇರಿ ಮತ್ತು ಸಮುದಾಯ ಭವನಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಫಲಕಗಳನ್ನು (Solar Rooftop Systems) ಅಳವಡಿಸಲಾಗಿದೆ. ಸುಸ್ಥಿರ ಜೀವನೋಪಾಯ (Sustainable Livelihoods): ಕಡಲೂರು ಜಿಲ್ಲೆಯ 'ಇರುಳ' (Irula) ಬುಡಕಟ್ಟು ಸಮುದಾಯದ ಜನರಿಗೆ ವೈಜ್ಞಾನಿಕ ಜೇನುಸಾಕಣೆ ತರಬೇತಿ ನೀಡಿ, 'ಪಿಚಾವರಂ ಮ್ಯಾಂಗ್ರೋವ್ ಹನಿ' (Pichavaram Mangrove Honey) ಬ್ರ್ಯಾಂಡ್ ಹೆಸರಿನಲ್ಲಿ ಸುಸ್ಥಿರ ಆದಾಯ ಕಂಡುಕೊಳ್ಳಲು ನೆರವಾಗಲಾಗಿದೆ. ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ