Job Description: * 'ಐಸಿಸಿ ಟೆಸ್ಟ್ ವಿಭಾಗದ ವರ್ಷದ ತಂಡ-2022' ನ್ನು ಘೋಷಿಸಿದ್ದು, ರಿಷಭ್ ಪಂತ್ ಐಸಿಸಿ ಪುರುಷರ ಟೆಸ್ಟ್-2022 ರ ತಂಡದಲ್ಲಿ ಹೆಸರು ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ.* ಕಳೆದ ವರ್ಷ ರಿಷಭ್ ಪಂತ್ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು 12 ಇನ್ನಿಂಗ್ಸ್ ನಲ್ಲಿ 680 ರನ್ ಗಳಿಸಿದ್ದ ಪಂತ್, ಶೇ.61.81 ರಷ್ಟು ಸರಾಸರಿ ಹೊಂದಿದ್ದು, 90.90 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2 ಶತಕ ದಾಖಲಿಸಿದ್ದರು. 2022 ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ರಿಷಭ್ ಪಂತ್ 21 ಸಿಕ್ಸ್ ಗಳಿಸಿದ್ದರು. 23 ಕ್ಯಾಚ್ ಗಳನ್ನು ಹೊಂದಿದ್ದರು.* 'ವರ್ಷದ ಮಹಿಳಾ ಏಕದಿನ ತಂಡ' ದಲ್ಲಿ ಭಾರತದ ಸ್ಮೃತಿ ಮಂದಾನಾ, ಹರ್ಮನ್ ಪ್ರೀತ್ ಕೌರ್ ಮತ್ತು ರೇಣುಕಾ ಸಿಂಗ್ ರವರಿಗೆ ಸ್ಥಾನ ದೊರೆತಿದೆ.