Job Description: ➤ ಭಾರತೀಯ ಬಾಹ್ಯಾಕಾಶ ರಂಗದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಹೈದರಾಬಾದ್ ಮೂಲದ ಬಾಹ್ಯಾಕಾಶ ನವೋದ್ಯಮ ಸಂಸ್ಥೆ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಿದ ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-1’ (Vikram-1) ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದೆ.➤ 'ಮಿಷನ್ ಆಗಮನ್' (Mission Aagaman) ಹೆಸರಿನ ಈ ಐತಿಹಾಸಿಕ ಉಡಾವಣೆಯು ಯಶಸ್ವಿಯಾಗುವುದರೊಂದಿಗೆ, ಖಾಸಗಿ ವಲಯದ ರಾಕೆಟ್ ಅನ್ನು ಭೂಮಿಯ ಕೆಳ ಕಕ್ಷೆಗೆ (Low Earth Orbit - LEO) ತಲುಪಿಸಿದ ವಿಶ್ವದ ಮೂರನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇದುವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಚೀನಾ ದೇಶಗಳು ಮಾತ್ರ ಈ ಜಾಗತಿಕ ಸಾಮರ್ಥ್ಯವನ್ನು ಹೊಂದಿದ್ದವು.➤ 'ವಿಕ್ರಮ್-1' ರಾಕೆಟ್‌ನ ತಾಂತ್ರಿಕ ವಿವರ: ಸುಮಾರು 22 ಮೀಟರ್ ಎತ್ತರ, ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ಕಾಯ ಹಾಗೂ 3D-ಪ್ರಿಂಟೆಡ್ ಎಂಜಿನ್ ಒಳಗೊಂಡಿರುವ 4-ಹಂತದ 'ವಿಕ್ರಮ್-1' ರಾಕೆಟ್, 350 ಕೆಜಿ ತೂಕದ ಉಪಗ್ರಹಗಳನ್ನು ಕೇವಲ 17 ನಿಮಿಷಗಳಲ್ಲಿ 450 ಕಿ.ಮೀ ಎತ್ತರದ ಕೆಳ-ಭೂ ಕಕ್ಷೆಗೆ (LEO) ನಿಖರವಾಗಿ ತಲುಪಿಸುವ ಅತ್ಯಾಧುನಿಕ ಸಾಮರ್ಥ್ಯ ಹೊಂದಿದೆ.➤ ಉಪಗ್ರಹಗಳು ಮತ್ತು ಗೌರವಪೂರ್ವಕ ಕೊಡುಗೆ: ಶನಿವಾರ (18-07-2026) ಮಧ್ಯಾಹ್ನ 12:05ಕ್ಕೆ ಶ್ರೀಹರಿಕೋಟದಿಂದ ಗಗನಕ್ಕೇರಿದ ರಾಕೆಟ್, ನಿಗದಿತ 450 ಕಿ.ಮೀ ಎತ್ತರದ ಕೆಳ ಭೂ-ಕಕ್ಷೆಗೆ (LEO) ಉಪಗ್ರಹಗಳನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು. ಪ್ರಮುಖ ಉಪಗ್ರಹಗಳು: ಸ್ಕೈರೂಟ್‌ನ 'SCOPE' ಹಾಗೂ ಗ್ರಾಹಾ ಸ್ಪೇಸ್ (Graha Space) ಸಂಸ್ಥೆಯ 'Solaras' ಉಪಗ್ರಹಗಳು. ಸಾಂಕೇತಿಕ ಕೊಡುಗೆ ಹಾಗೂ ಗೌರವ: ಈ ಮಿಷನ್‌ನಲ್ಲಿ ಭಾರತೀಯ ವಿಜ್ಞಾನ ರಂಗದ ಪಿತಾಮಹರಾದ ಡಾ. ವಿಕ್ರಮ್ ಸಾರಾಭಾಯ್, ಸರ್ ಸಿ.ವಿ. ರಾಮನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ತಯಾರಿಸಲಾದ 18 ಕ್ಯಾರೆಟ್ ಬಂಗಾರದ ಸಾಂಕೇತಿಕ ಕಲಾಕೃತಿ, ಬೆಂಕಿ ನಿರೋಧಕ ಲ್ಯಾಬ್-ಗ್ರೋನ್ ಡೈಮಂಡ್ ("Diamond Lotus") ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 'ವಂದೇ ಮಾತರಂ' ಹಸ್ತಪ್ರತಿ ಸಂದೇಶವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ. ➤ 2020 ರಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ವಲಯದಲ್ಲಿ ತಂದ ಕ್ರಾಂತಿಕಾರಿ ಸುಧಾರಣೆಗಳು ಮತ್ತು IN-SPACe ಸಂಸ್ಥೆಯ ಸ್ಥಾಪನೆಯು ಭಾರತೀಯ ಖಾಸಗಿ ಸಂಸ್ಥೆಗಳಿಗೆ ಇಸ್ರೋ ತಂತ್ರಜ್ಞಾನ ಮತ್ತು ಉಡಾವಣಾ ಕೇಂದ್ರಗಳನ್ನು ಬಳಸಿಕೊಳ್ಳಲು ಬಾಗಿಲು ತೆರೆಯಿತು.➤ ಪವನ್ ಕುಮಾರ್ ಚಂದನಾ (ಸಹ-ಸಂಸ್ಥಾಪಕರು ಹಾಗೂ ಸಿಇಒ, ಸ್ಕೈರೂಟ್ ಏರೋಸ್ಪೇಸ್): "ವಿಕ್ರಮ್-1 ಕೇವಲ ಒಂದು ರಾಕೆಟ್ ಅಲ್ಲ, ಇದು ಭಾರತೀಯ ಖಾಸಗಿ ರಂಗದ ತಾಂತ್ರಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಇಸ್ರೋ ನಮಗೆ ನೀಡಿದ ಮಾರ್ಗದರ್ಶನ ಹಾಗೂ ಬೆಂಬಲ ಮತ್ತು ನಮ್ಮ ಯುವ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದಾಗಿ ಈ ಜಾಗತಿಕ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿದೆ."