Job Description: ಫಿನ್ಲೆಂಡ್ ವಿಶ್ವದ ಅತ್ಯಂತ ಸಂತುಷ್ಟ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಬಿಡುಗಡೆಯಾಗಿರುವ ವಾರ್ಷಿಕ 'ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್' ವರದಿಯ ಪ್ರಕಾರ ಸತತ ಆರನೇ ವರ್ಷವು ಸಹ ಫಿನ್ಲೆಂಡ್ ಈ ಕಿರೀಟವನ್ನು ಉಳಿಸಿಕೊಂಡಿದೆ.- ಜಿಡಿಪಿ, ತಲಾದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ನಿರೀಕ್ಷಿತ ಜೀವಿತಾವಧಿ, ಸ್ವಾತಂತ್ರ್ಯ, ಉದಾರತೆ ಮತ್ತು ಕಡಿಮೆ ಲಂಚದ ಮಾನದಂಡದಲ್ಲಿ ಈ ವರದಿ ಸಿದ್ಧಪಡಿಸಲಾಗುತ್ತದೆ.- ಅಂತರರಾಷ್ಟ್ರೀಯ ಸಂತಸ ದಿನ (ಮಾರ್ಚ್ 20)ರಂದು ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರದಿಯ ಪ್ರಕಾರ ವಿವಿಧ ಮಾನದಂಡಗಳ ಅನ್ವಯ ಭಾರತವು 125ನೇ ಸ್ಥಾನವನ್ನು ಪಡೆದುಕೊಂಡಿದೆ.