* ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಮಾಹಿತಿ ಮತ್ತು ಗ್ರಂಥಾಲಯ ನೆಟ್‌ವರ್ಕ್ (INFLIBNET) ಕೇಂದ್ರವು ಮಹಿಳಾ ವಿಜ್ಞಾನಿಗಳಿಗೆ ಸಮಾನ ಪ್ರತಿನಿತ್ಯವನ್ನು ಖಚಿತಪಡಿಸಿಕೊಳ್ಳಲು 'ಷಿ ರಿಸರ್ಚ್ ನೆಟ್‌ವರ್ಕ್ ಇನ್ ಇಂಡಿಯಾ' (SheRNI) ಎಂದು ಎಂಬ ಉಪಕ್ರಮವನ್ನು ಪ್ರಾರಂಬಿಸಿದೆ.* SheRNI ವೆಬ್‌ಸೈಟ್ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ತೊಡಗಿರುವ ಭಾರತೀಯ ಮಹಿಳೆಯರ 81,818 ಪ್ರೊಫೈಲ್‌ಗಳನ್ನು ಲಿಂಕ್ ಮಾಡುವ ಗುರಿಯನ್ನು ಹೊಂದಿದೆ ಎಂದು UGC ತಿಳಿಸಿದೆ.* ಈ ವೇದಿಕೆಯು ಮಹಿಳಾ ವಿಜ್ಞಾನಿಗಳು ಮತ್ತು ಅಧ್ಯಾಪಕ ಸದಸ್ಯರಿಗೆ ದೃಢವಾದ ವೃತ್ತಿಪರ ಸಂಪರ್ಕಗಳನ್ನು ಬೆಳೆಸಲು, ಸಹಯೋಗ, ಮಾರ್ಗದರ್ಶನ ಮತ್ತು ವೃತ್ತಿಜೀವನದ ಪ್ರಗತಿಗೆ ಮಾರ್ಗಗಳನ್ನು ಸುಗಮಗೊಳಿಸುತ್ತದೆ.* ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಬಗ್ಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗವು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಾಸನಬದ್ಧ ಸಂಸ್ಥೆಯಾಗಿದೆ.* SheRNI ಉಪಕ್ರಮವು ಅರ್ಥಪೂರ್ಣ ಮೈತ್ರಿಗಳನ್ನು ಉತ್ತೇಜಿಸುವ ಮೂಲಕ, ಸಹಯೋಗವನ್ನು ಉತ್ತೇಜಿಸುವ ಮತ್ತು ಪರಸ್ಪರ ಬೆಂಬಲಿಸುವ ಮೂಲಕ ಮಹಿಳಾ ವೃತ್ತಿಪರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ,.* ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಮಹಿಳೆಯರ ಸಂಶೋಧನೆ ಮತ್ತು ಆವಿಷ್ಕಾರವನ್ನು ಗುರುತಿಸುವುದು ಮುಖ್ಯವಾಗಿದೆ ಎಂದು UGC ಅಧ್ಯಕ್ಷರಾದ ಎಂ ಜಗದೇಶ್ ಕುಮಾರ್ ಅವರು ತಿಳಿಸಿದ್ದಾರೆ.* SheRNI ಡೇಟಾಬೇಸ್ ಪ್ರಸ್ತುತ 81,818 ಮಹಿಳಾ ಅಧ್ಯಾಪಕರ ಪ್ರೊಫೈಲ್‌ಗಳನ್ನು ಪ್ರದರ್ಶಿಸುತ್ತದೆ, ಇದಲ್ಲದೆ 675,313 ಪ್ರಕಟಣೆಗಳು ಮತ್ತು 11,543 ಪೇಟೆಂಟ್‌ಗಳ ವ್ಯಾಪಕ ಸಂಗ್ರಹವನ್ನು ಒಳಗೊಂಡಿದೆ.