* ಭವಿಷ್ಯದ ಯುದ್ಧಕ್ಕೆ ಅಗತ್ಯವಾದ ತಾಂತ್ರಿಕವಾಗಿ ಮುಂದುವರಿದ 1,770 ಭವಿಷ್ಯದ ಸಿದ್ಧ ಯುದ್ಧ ವಾಹನಗಳನ್ನು (FRCV) ಗಳನ್ನೂ ಖರೀದಿಸಲು ಭಾರತೀಯ ಸೇನೆ ಯೋಜನೆ ರೂಪಿಸಿದೆ *  2030 ರಿಂದ ಹಳೆಯ ರಷ್ಯನ್ ಮೂಲದ T-72 ಟ್ಯಾಂಕ್‌ಗಳನ್ನು ಬದಲಿಸಲು ಭಾರತದಲ್ಲಿ 1,770 ಪ್ಯೂಚರ್ ರೆಡಿ ಕಂಬಾಟ್ ವೆಹಿಕಲ್ಸ್ (FRCV) ಉತ್ಪಾದಿಸಲು ಅಂದಾಜು 57,000 ಕೋಟಿ ಡಾಲರ್ ಗಳ ಮೆಗಾ ಯೋಜನೆಯಡಿ ಈ ಖರೀದಿ ಮಾಡಲಾಗುತ್ತದೆ.* 1969ರಲ್ಲಿ ಪ್ರಾರಂಭವಾದ ಟಿ-72 ಟ್ಯಾಂಕ್ ಸೋವಿಯತ್ ಒಕ್ಕೂಟದ ಮುಖ್ಯ ಸಮರ ಟ್ಯಾಂಕ್‌ಗಳ ಕುಟುಂಬಕ್ಕೆ ಸೇರಿದ ಟ್ಯಾಂಕ್ ಆಗಿದೆ. ಸುಮಾರು 25,000 ಟಿ-72 ಟ್ಯಾಂಕ್ ಗಳನ್ನು ಉತ್ಪಾದಿಸಲಾಗಿತ್ತು. * ಟಿ-72 ಟ್ಯಾಂಕ್ ಗಳನ್ನು ವ್ಯಾಪಕವಾಗಿ ರಫ್ತು ಮಾಡಲಾಗಿದ್ದು 40 ದೇಶಗಳ ಸೇನೆಗಳಲ್ಲಿ ಸೇವೆ ಸಲ್ಲಿಸಿವೆ. ಟಿ-72 ಮಾದರಿಯ ಹಲವು ಆಧುನಿಕ ಟ್ಯಾಂಕ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಇಂದಿಗೂ ಮುಂದುವರಿದಿದೆ.* ಮೊದಲ ಬ್ಯಾಚ್‌ನಲ್ಲಿ 590 ಪ್ಯೂಚರ್ ರೆಡಿ ಕಂಬಾಟ್ ವೆಹಿಕಲ್ಸ್ (FRCV)ಗಳನ್ನು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ. ಪ್ರತಿ ಬ್ಯಾಚ್‌ನ ಸಾಮರ್ಥ್ಯ ಹೆಚ್ಚಳವು ಶಸ್ತ್ರಾಸ್ತ್ರ, ಸಂಚಾರ ಮತ್ತು ಸಶಸ್ತ್ರ ರಕ್ಷಣಾ ವ್ಯವಸ್ಥೆಗಳ ಉನ್ನತೀಕರಣವನ್ನು ಒಳಗೊಂಡಿರುತ್ತದೆ.