* ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ. ಗಂಗಾಧರನ್ ಅವರು 'ಮಲಯಾಳಂ ಕಥೆಗಳು' ಕೃತಿ ಆಯ್ಕೆಯಾಗಿದೆ. * ಮಲಯಾಳಂ ಭಾಷೆಯ ವಿವಿಧ ಲೇಖಕರ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಈ ಕೃತಿ ರಚಿಸಿದ್ದಾರೆ. ಇದೂ ಸೇರಿದಂತೆ ಅಕಾಡೆಮಿಯು ವಿವಿಧ ಭಾಷೆಗಳ 24 ಕೃತಿಗಳಿಗೆ 'ಭಾಷಾಂತರ ಪ್ರಶಸ್ತಿ'ಯನ್ನು ಮಾರ್ಚ್ 11 ರಂದು (ಸೋಮವಾರ) ಪ್ರಕಟಿಸಿದೆ.* ಇನ್ಫೊಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರು ಬರೆದ ‘ಮಕ್ಕಳಿಗೆ ನನ್ನ ನೆಚ್ಚಿನ ಕತೆಗಳು’ ಕೃತಿಯ ಸಂಸ್ಕೃತ ಅನುವಾದ ‘ರುಚಿರಃ ಬಾಲಕಥಹಃ ’ (ಅನುವಾದಕಿ: ನಾಗರತ್ನ ಹೆಗಡೆ) ಪ್ರಶಸ್ತಿಗೆ ಆಯ್ಕೆಯಾಗಿದೆ.* ಸಾಹಿತಿ ಕೋಟ ಶಿವರಾಮ ಕಾರಂತ ಅವರ 'ಚೋಮನದುಡಿ' ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ದಾರ್ ಅಹ್ಮದ್ ರಥೇರ್ ಅವರು 'ಚೂಮ್ ಸುಂಡ್ ಡೋಲ್ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.* ಈ ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.  ಈ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲ ಕನ್ನಡ ವಿಭಾಗದ ವಿಮರ್ಶಕಿ ಎಂ.ಎಸ್.ಆಶಾದೇವಿ, ಕಥೆಗಾರ ಕೇಶವ ಮಳಗಿ ಮತ್ತು ಪ್ರೊ.ಎಸ್.ಸಿರಾಜ್ ಅಹ್ಮದ್ ಅವರು ಪಾಲ್ಗೊಂಡಿದ್ದರು.