Job Description: - ಭಾರತ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿನೊಂದಿಗೆ ರಾಯ್ ಬರೇಲಿ ಹಾಕಿ ಕ್ರೀಡಾಂಗಣವನ್ನು ಮರು ನಾಮಕರಣ ಮಾಡಲಾಗಿದೆ. ಎಂಸಿಎಫ್ ರಾಯ್ ಬರೇಲಿ ಹಾಕಿ ಕ್ರೀಡಾಂಗಣವನ್ನು ‘ರಾಣಿ ಗರ್ಲ್ಸ್ ಹಾಕಿ ಟರ್ಫ್’ ಎಂದು ಮರುನಾಮಕರಣ ಮಾಡಲಾಗಿದೆ. ಮತ್ತು ಇದರೊಂದಿಗೆ ಹಾಕಿ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರಾಣಿ ರಾಂಪಾಲ್ ಅವರು ಪಾತ್ರರಾಗಿದ್ದಾರೆ.- ರಾಣಿ ರಾಂಪಾಲ್ ಅವರು ಎಫ್‌ಐಎಚ್ ಮಹಿಳಾ ಹಾಕಿ ಪ್ರೊಲೀಗ್ 2021-22ರಲ್ಲಿ ಬೆಲ್ಜಿಯಂ ವಿರುದ್ಧ ಕೊನೆಯ ಬಾರಿ ಆಡಿದ್ದರು.