Job Description: - ಪ್ರತಿ ವರ್ಷ ಮಾರ್ಚ್ 21 ರಂದು, ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಗುತ್ತದೆ ಮತ್ತು ಎಲ್ಲಾ ರೀತಿಯ ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.- ಭೂಭಾಗದ ಮೂರನೇ ಒಂದು ಭಾಗವನ್ನು ಅರಣ್ಯಗಳು ಆವರಿಸಿವೆ. ಸುಮಾರು 1.6 ಶತಕೋಟಿ ಜನರು ತಮ್ಮ ಜೀವನೋಪಾಯವನ್ನು, ಔಷಧಗಳು, ಇಂಧನ, ಆಹಾರ ಮತ್ತು ಆಶ್ರಯಕ್ಕಾಗಿ ಅರಣ್ಯವನ್ನೆ ಅವಲಂಬಿಸಿದ್ದಾರೆ. ಅರಣ್ಯಗಳು 80 ಪ್ರತಿಶತಕ್ಕಿಂತಲೂ ಹೆಚ್ಚು ಭೂಮಿ ಪ್ರಾಣಿಗಳು, ಕೀಟಗಳು ಹಾಗೂ ಸಸ್ಯಗಳಿಗೆ ನೆಲೆಯಾಗಿದೆ. ಭೂಮಿಯ ಮೇಲಿನ ಎಲ್ಲಾ ಕಾಡುಗಳಲ್ಲಿ 3 ಟ್ರಿಲಿಯನ್ ನಷ್ಟು ಮರಗಳಿವೆ. ಕಾಡುಗಳನ್ನು ಮರಗಳ ದೊಡ್ಡ ಗುಂಪು ಎಂದು ವ್ಯಾಖ್ಯಾನಿಸಲಾಗಿದೆ. ನಿಜವಾದ ಅರಣ್ಯವೆಂದು ಪರಿಗಣಿಸಬೇಕಾದರೆ, ಮರಗಳು ಕನಿಷ್ಠ 0.5 ಹೆಕ್ಟೇರ್‌ಗಳನ್ನು ಆವರಿಸಬೇಕು.ಅರಣ್ಯ ದಲ್ಲಿ ಪ್ರಮುಖವಾಗಿ 3ಪ್ರಾಥಮಿಕ ವಿಧಗಳು * ಉಷ್ಣವಲಯ: ತಾಪಮಾನವು 68 ರಿಂದ 77 ಡಿಗ್ರಿ ಎಫ್. ವರೆಗೆ ಇರುತ್ತದೆ ಮತ್ತು ವರ್ಷಕ್ಕೆ 100 ಇಂಚುಗಳಷ್ಟು ಮಳೆಯಾಗುತ್ತದೆ.* ಸಮಶೀತೋಷ್ಣ: ಸಮಶೀತೋಷ್ಣ ಪತನಶೀಲ ಮತ್ತು ಸಮಶೀತೋಷ್ಣ ಕೋನಿಫೆರಸ್ ಸೇರಿದಂತೆ ಎರಡು ಉಪವರ್ಗಗಳಾಗಿ ವಿಂಗಡಿಸಲಾಗಿದೆ.* ಬೋರಿಯಲ್: ಟೈಗಾ ಅರಣ್ಯಗಳು ಎಂದೂ ಕರೆಯುತ್ತಾರೆ, ಅವು ಸೈಬೀರಿಯಾ, ಕೆನಡಾ ಮತ್ತು ಸ್ಕ್ಯಾಂಡಿನೇವಿಯಾದಂತಹ ಶೀತ ವಾತಾವರಣದಲ್ಲಿ ಬೆಳೆಯುತ್ತವೆ. ವರ್ಷಕ್ಕೆ 15 ರಿಂದ 40 ಇಂಚುಗಳಷ್ಟು ಮಳೆಯನ್ನು ಪಡೆಯುತ್ತವೆ.*2023ರ ವಿಶ್ವ ಅರಣ್ಯ ದಿನಾಚರಣೆಯ ಘೋಷವಾಕ್ಯ : "ಅರಣ್ಯಗಳು ಮತ್ತು ಆರೋಗ್ಯ" (Forests and Health).