Job Description: * ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಆಕರ್ಷಕ ಉದ್ಯಾನವನವನ್ನು ಇಲ್ಲಿಯವರೆಗೂ ಮೊಘಲ್ ಗಾರ್ಡನ್ಸ್ ಎನ್ನುವ ಹೆಸರನಿಂದ ಕರೆಯಲಾಗುತ್ತಿತ್ತು. ಈ ಉದ್ಯಾನವನವನ್ನು ಈಗ "ಅಮೃತ್ ಉದ್ಯಾನ" ಎಂದು ಕರೆಯಲಾಗುತ್ತದೆ. * ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿರುವ ಅಂಗವಾಗಿ "ಆಜಾದಿ ಕಾ ಅಮೃತ್ ಮಹೋತ್ಸವ" ಅಭಿಯಾನದ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಹೆಸರನ್ನು ನೀಡಿದ್ದಾರೆ ಎನ್ನಲಾಗಿದೆ.* ಜನವರಿ 31 ರಿಂದ ಮಾರ್ಚ್ 26 ರವರೆಗೆ ಈ ಉದ್ಯಾನವನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇದರ ಹೊರತಾಗಿ, ಕೆಲವು ದಿನಗಳನ್ನು ವಿಶೇಷವಾಗಿ ವಿಕಲಚೇತನರಿಗೆ, ರೈತರು ಮತ್ತು ಮಹಿಳೆಯರುಗೆ ಮೀಸಲಿಡಲಾಗಿದೆ ಎಂದಿದ್ದಾರೆ.