Job Description: * ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಜನೆವರಿ 28 ರಂದು ಪತನವಾಗಿವೆ. ಸುಖೋಯ್ - 30 ಎಂಕೆಐ ಹಾಗೂ ಮಿರಾಜ್ - 2000 ಯುದ್ಧ ವಿಮಾನಗಳು ದಿನನಿತ್ಯದ ಹಾರಾಟ ತರಬೇತಿಗೆ ತೆರಳಿದಾಗ ಈ ಘಟನೆ ಸಂಭವಿಸಿದೆ. * ಮಿರಾಜ್ ಯುದ್ಧ ವಿಮಾನದಲ್ಲಿದ್ದ ಪೈಲೆಟ್, ಬೆಳಗಾವಿಯ ವಿಂಗ್ಸ್ ಕಮಾಂಡರ್ ಹನುಮಂತರಾವ್ ಸಾರಥಿ ಮೃತಪಟ್ಟಿದ್ದಾರೆ. ಸುಖೋಯ್ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳು ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.