Job Description: * ರಾಡ್ ಲೆವರ್ ಅರೆನಾದಲ್ಲಿ ನಡೆದ ಫೈನಲ್ ನಲ್ಲಿ ಬೇಲಾರೂಸ್ ದೇಶದ ಸಬಲೆಂಕಾ ಜ.28 ರಂದು ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದುಕೊಂಡರು. ಇದು ಅವರ ಪ್ರಪ್ರಥಮ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ.* 2 ತಾಸು 28 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು. ಹಾಲಿ ವಿಂಬಲ್ಡನ್ ಚಾಂಪಿಯನ್ ಗೆ ಸೋಲಿಸಿದ ಸಬಲೆಂಕಾ ರವರು ಆನಂದ ಭಾಷ್ಪ ಸುರಿಸಿದರು. ಗ್ರೌಂಡ್ ಸ್ಟ್ರೋಕ್ ಗಳು, ನಿಖರ ಸರ್ವ್ ಗಳು ಮತ್ತು ಅದ್ಭುತ ರ್ಯಾಲಿ ಪಂದ್ಯದ ಮೆರಗು ಹಚ್ಚಿದವು. * ಪ್ರಶಸ್ತಿ ಗೆಲ್ಲುವ ಮೂಲಕ ಸಬಲೆಂಕಾ 2000 ರೇಟಿಂಗ್‌ ಅಂಕಗಳನ್ನು ಗಳಿಸಿದ್ದು, ಮುಂದಿನ ವಾರ ವಿಶ್ವ ರ‍್ಯಾಂಕಿಂಗ್‌‌ 2ನೇ ಸ್ಥಾನಕ್ಕೇರಲಿದ್ದಾರೆ. ಸದ್ಯ 4340 ರೇಟಿಂಗ್‌ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಸಬಲೆಂಕಾ 6000 ರೇಟಿಂಗ್‌ ದಾಟಲಿದ್ದಾರೆ. * 11025 ರೇಟಿಂಗ್‌ ಅಂಕ ಹೊಂದಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ನಂ.1 ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. 22ನೇ ಸ್ಥಾನದಲ್ಲಿರುವ ರಬೈಕೆನಾ ಅಗ್ರ 10ರೊಳಗೆ ಪ್ರವೇಶಿಸುವ ನಿರೀಕ್ಷೆ ಇದೆ.