* ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ಲಕ್ಷ್ಯಾ ಸೇನ್‌ ಅವರು ಮುಗ್ಗರಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪದಕ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಯಾ ಸೇನ್‌ ಅವರ ಪದಕ ಗುರಿ ತಪ್ಪಿದೆ.* ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದ ಸೇನ್‌ ಬಳಿಕ ನಡೆದ ಹೋರಾಟದಲ್ಲಿ ಸತತ ಎರಡು ಸುತ್ತುಗಳಲ್ಲಿ ಸೋಲು ಕಂಡರು ಆ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿದರು.* ಆಗಸ್ಟ್ 4 ರಂದು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಅವರು ಡೆನ್ಮಾರ್ಕಿನ ವಿಕ್ಟರ್ ಆ್ಯಕ್ಸೆಲ್ಸನ್ ವಿರುದ್ಧ ಸೋತಿದ್ದರು.* ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ 21-13ರ ಅಂತರದಿಂದ ಗೆದ್ದ ಸೇನ್‌, ಉಳಿದೆರೆಡು ಸೆಟ್‌ಗಳಲ್ಲಿ 21-16 ಮತ್ತು 21-11 ಮೂಲಕ ಝೀ ಜಿಯಾ ಲೀ ಅವರು ಗೆದ್ದರು. ಆ ಮೂಲಕ ಝೀ ಜಿಯಾ ಲೀ ಕಂಚಿನ ಪದಕಕ್ಕೆ ಕೊರಳೊಡ್ಡಿದರು.* ಡೆನ್ಮಾರ್ಕಿನ ವಿಕ್ಟರ್ ಆ್ಯಕ್ಸೆಲ್ಸನ್ ಮೇ ಸಲ ಅವರು ಸತತ ಎರಡನೇ ಬಾರಿ ಚಿನ್ನ ಪದಕ ಪಿಂಗ್ ಜಯಿಸಿದರು. ಫೈನಲ್‌ನಲ್ಲಿ ವಿಕ್ಟ‌ರ್ 21-11, 21-11ರಿಂದ ಅವರು ವಿಶ್ವ ಚಾಂಪಿಯನ್, ಥಾಯ್ಲೆಂಡ್‌ನ ಕುಸ್ತಾವತ್ ಮೇಲೆ ವಿತಿಸಾರ್ನ್ ವಿರುದ್ಧ ಜಯಿಸಿದರು.