* ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಮತ್ತು ಕೋಚ್ ಗ್ರಹಾಂ ಥೋರ್ಪ್ ಗಂಭೀರ ಅನಾರೋಗ್ಯದಿಂದ ಆಗಸ್ಟ್ 5 ರಂದು ನಿಧನರಾದರು.* ಮಾಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿದ್ದ ಥೋರ್ಪ್ ಅವರು 2022 ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ ಅನಾರೋಗ್ಯದ ಪರಿಣಾಮ ಆ ಹುದ್ದೆ ವಹಿಸಲಾಗಲಿಲ್ಲ. ಅವರ ಕಾಯಿಲೆ ಸ್ವರೂಪವನ್ನು ಬಹಿರಂಗ ಪಡಿಸಿಲ್ಲ.* ಎಡಗೈ ಬ್ಯಾಟರ್ ಆದ ಥೋರ್ಪ್ ಅವರು 1993ರಲ್ಲಿ ಆ್ಯಷಸ್ ಶತಕದೊಡನೆ ಟೆಸ್ಟ್ ಗೆ ಪ್ರವೇಶಿಸಿದರು. ಕೌಂಟಿ ಕ್ರಿಕೆಟ್ ನಲ್ಲಿ ಸರ್ರೆ ತಂಡಕ್ಕೆ 17 ವರ್ಷಕ್ಕೆ ಆಡಿದ್ದು,20,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.* 2005 ರಲ್ಲಿ ನಿವೃತ್ತಿ ಪಡೆದು, ನಂತರ ತರಬೇತಿಗೆ ಇಳಿದರು. ನ್ಯೂಸೌತ್ ವೇಲ್ಸ್ ಕೋಚ್ ಆಗಿದ್ದರು. 2010 ರಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. 2021-22 ಆ್ಯಷಸ್ ಪ್ರವಾಸದಲ್ಲಿ 0-4 ವೈಟ್ ವಾಷ್ ನಂತರ ಅವರನ್ನು ಕೈಬಿಡಲಾಯಿತು.