Job Description: ➤ ಪ್ರತಿ ವರ್ಷ ಆಗಸ್ಟ್ 1 ರಂದು ಪ್ರಪಂಚದಾದ್ಯಂತ ವರ್ಲ್ಡ್ ವೈಡ್ ವೆಬ್ ದಿನ (World Wide Web Day 2026) ವನ್ನು ಆಚರಿಸಲಾಗುತ್ತದೆ. ಆಧುನಿಕ ಸಮಾಜದ ಸಂಪರ್ಕ, ಶಿಕ್ಷಣ, ವಾಣಿಜ್ಯ ಮತ್ತು ತಂತ್ರಜ್ಞಾನ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ವರ್ಲ್ಡ್ ವೈಡ್ ವೆಬ್ (WWW) ಆವಿಷ್ಕಾರವನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ.➤ ವರ್ಲ್ಡ್ ವೈಡ್ ವೆಬ್ ಎಂಬುದು ಇಂಟರ್ನೆಟ್ ಮೂಲಕ ಪ್ರವೇಶಿಸಬಹುದಾದ ಪರಸ್ಪರ ಸಂಪರ್ಕಿತ ವೆಬ್‌ಪುಟಗಳು (Web Pages) ಮತ್ತು ವೆಬ್‌ಸೈಟ್‌ಗಳ ಸರಣಿಯಾಗಿದೆ. ಬಳಕೆದಾರರು ವೆಬ್ ಬ್ರೌಸರ್ (Web Browser) ಸಹಾಯದಿಂದ ಈ ಮಾಹಿತಿಯನ್ನು ಪಡೆಯುತ್ತಾರೆ.➤ WWW ನಿರ್ಮಾಣಕ್ಕೆ ಪ್ರಮುಖವಾಗಿ 3 ತಂತ್ರಜ್ಞಾನಗಳು ಅಡಿಪಾಯವಾಗಿವೆ: HTML (HyperText Markup Language): ವೆಬ್‌ಪುಟಗಳನ್ನು ವಿನ್ಯಾಸಗೊಳಿಸಲು ಬಳಸುವ ಭಾಷೆ. HTTP (HyperText Transfer Protocol): ಮಾಹಿತಿಯನ್ನು ಸರ್ವರ್‌ನಿಂದ ಬಳಕೆದಾರರಿಗೆ ರವಾನಿಸುವ ಪ್ರೋಟೋಕಾಲ್. URL (Uniform Resource Locator): ಅಂತರ್ಜಾಲದಲ್ಲಿ ವೆಬ್‌ಪುಟ ಅಥವಾ ದಾಖಲೆಯ ವಿಳಾಸ (Address). ➤ WWW ಇತಿಹಾಸ ಮತ್ತು ಪ್ರಮುಖ ಮೈಲಿಗಲ್ಲುಗಳು: 1989 (ಮಾರ್ಚ್): ಸ್ವಿಟ್ಜರ್‌ಲ್ಯಾಂಡ್‌ನ 'ಸರ್ನ್' (CERN) ಸಂಶೋಧನಾ ಕೇಂದ್ರದಲ್ಲಿದ್ದ ಬ್ರಿಟಿಷ್ ಕಂಪ್ಯೂಟರ್ ವಿಜ್ಞಾನಿ ಸರ್ ಟಿಮ್ ಬರ್ನರ್ಸ್ ಲೀ (Sir Tim Berners-Lee) ಅವರು ಗ್ಲೋಬಲ್ ಹೈಪರ್‌ಟೆಕ್ಸ್ಟ್ ಸಿಸ್ಟಮ್ ಕುರಿತು ಮೊದಲ ಪ್ರಸ್ತಾವನೆಯನ್ನು ಮಂಡಿಸಿದರು. 1990 (ನವೆಂಬರ್): ರೊಬರ್ಟ್ ಕೈಲಿಯೌ (Robert Cailliau) ಅವರೊಂದಿಗೆ ಸೇರಿ ಅಧಿಕೃತ ಪ್ರಸ್ತಾವನೆ ಸಲ್ಲಿಸಿದರು. 1990 (ಡಿಸೆಂಬರ್): ವಿಶ್ವದ ಮೊದಲ ವೆಬ್ ಬ್ರೌಸರ್, ವೆಬ್ ಸರ್ವರ್ ಮತ್ತು ವೆಬ್ ಎಡಿಟರ್ ಅನ್ನು ಅಭಿವೃದ್ಧಿಪಡಿಸಲಾಯಿತು. 1991 (ಆಗಸ್ಟ್): ವರ್ಲ್ಡ್ ವೈಡ್ ವೆಬ್ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. 1993 (ಏಪ್ರಿಲ್ 30): CERN ಸಂಸ್ಥೆಯು WWW ಸಾಫ್ಟ್‌ವೇರ್ ಅನ್ನು ಉಚಿತವಾಗಿ (Royalty-free) ಸಾರ್ವಜನಿಕ ಡೊಮೇನ್‌ಗೆ ಬಿಡುಗಡೆ ಮಾಡಿತು. ➤ ವೆಬ್‌ನ ವಿಕಸನ: Web 1.0 (1990 - 2000): ಸ್ಥಿರ ವೆಬ್‌ಪುಟಗಳು (Static Pages). ಬಳಕೆದಾರರು ಕೇವಲ ಮಾಹಿತಿಯನ್ನು ಓದಬಹುದಾಗಿತ್ತು (Read-Only). Web 2.0 (2000 - 2010): ಸಂವಾದಾತ್ಮಕ ವೆಬ್ (Interactive Web). ಸೋಶಿಯಲ್ ಮೀಡಿಯಾ, ಬ್ಲಾಗ್‌ಗಳು, ಬಳಕೆದಾರರು ರಚಿಸುವ ವಿಷಯಗಳು (User-Generated Content) ಮತ್ತು ಈ-ಕಾಮರ್ಸ್ ಕ್ರಾಂತಿ. Web 3.0 (2010 - ಪ್ರಸ್ತುತ): ಕೃತಕ ಬುದ್ಧಿಮತ್ತೆ (AI), ಸೆಮ್ಯಾಂಟಿಕ್ ವೆಬ್, ಕ್ಲೌಡ್ ತಂತ್ರಜ್ಞಾನ ಮತ್ತು ವಿಕೇಂದ್ರೀಕೃತ ನೆಟ್‌ವರ್ಕ್ (Decentralization). KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ