* ಸ್ವದೇಶಿ ಕ್ಷಿಪಣಿ ತಯಾರಿಕಾ ಸಾಮರ್ಥ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ವಾಯುಪಡೆಯು ಸಾರ್ವಜನಿಕ ವಲಯದ ಭಾರತ್‌ ಡೈನಾಮಿಕ್ಸ್ ಲಿಮಿಟೆಡ್‌ಗೆ 200 ಅಸ್ಟ್ರಾ ಮಾರ್ಕ್‌ 1 ಏರ್‌-ಟು-ಏರ್‌ ಕ್ಷಿಪಣಿಗಳ ಉತ್ಪಾದನೆಗೆ ಅನುಮತಿ ನೀಡಿದೆ.* ರಕ್ಷಣಾ ಸಂಶೋಧನೆ ಮತ್ತು ಅಭಿವದ್ಧಿ ಸಂಸ್ಥೆಯು ಅಸ್ಟ್ರಾ ಮಾರ್ಕ್‌ 1 ಕ್ಷಿಪಣಿಗಳನ್ನು ಬಿಡಿಎಲ್‌ ಅನ್ನು ಉತ್ಪಾದನಾ ಏಜೆನ್ಸಿಯಾಗಿ ಅಭಿವದ್ಧಿಪಡಿಸಿದೆ.* ರಕ್ಷಣಾ ಸಂಶೋಧನೆ ಮತ್ತು ಅಭಿವದ್ಧಿ ಪ್ರಯೋಗಾಲಯ (DRDL) ಈ ಯೋಜನೆಗೆ ನೋಡಲ್‌ ಲ್ಯಾಬ್ ಆಗಿದೆ. * ಅಸ್ಟ್ರಾ ಕ್ಷಿಪಣಿಗಳನ್ನು ರಷ್ಯಾದ ಮೂಲದ ಎಸ್‌‍-30 ಮತ್ತು ಉತ್ಪಾದನೆಯ ನಂತರ ಸ್ಥಳೀಯ ಎಲ್‌ಸಿಎ ತೇಜಸ್‌‍ ಯುದ್ಧ ವಿಮಾನಗಳೆರಡರಲ್ಲೂ ಸಂಯೋಜಿಸಲಾಗುತ್ತದೆ.* ರಕ್ಷಣಾ ಸ್ವಾಧೀನ ಮಂಡಳಿಯು 2022-23ರಲ್ಲಿ 2,900 ಕೋಟಿ ವೆಚ್ಚದ ಈ ಯೋಜನೆಗೆ ಅನುಮೋದನೆ ನೀಡಿದೆ.