Job Description: * ನೇಪಾಳ ವಿಮಾನ ದುರಂತ, ಐವರು ಭಾರತೀಯರೂ ಸೇರಿ 72 ಮಂದಿ ದುರ್ಮರಣ ಹೊಂದಿದ್ದಾರೆ. ವಿಮಾನದಲ್ಲಿ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಇದ್ದರು. ‘ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನ ದುರಂತ ಸಂಭವಿಸಿದೆ.* ನೇಪಾಳ ರಾಜಧಾನಿ ಕಠ್ಮಂಡುವಿನಿಂದ ವಿಮಾನ ಹೊರಟಿದ್ದು, ಪೊಖರಾ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವ ಸ್ವಲ್ಪ ದೂರದಲ್ಲೇ ಅವಘಡವಾಗಿದೆ. ರನ್‌ವೇ ತಲುಪಲು ಕೇವಲ 12ರಿಂದ 15 ಸೆಕೆಂಡ್‌ಗಳಿರುವಾಗ ಪತನವಾಗಿದೆ. * ಯೇತಿ ವಿಮಾನ ಸೇಟಿ ನದಿಯ ದಂಡೆಗೆ ಅಪ್ಪಳಿಸಿದ್ದು, ಎರಡು ತುಂಡಾಗಿ 300 ಅಡಿ ಕಮರಿಗೆ ಬಿದ್ದಿದೆ. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಬಹುತೇಕರು ಕರಕಲಾಗಿದೆ. ರನ್‌ವೇಯಿಂದ ಕೇವಲ 75 ಮೀಟರ್‌ಗಳಷ್ಟು ಎತ್ತರದಲ್ಲಿದ್ದಾಗ ಅವಘಡ ಸಂಭವಿಸಿದೆ.