Job Description: * ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ 'ನಾಸಾ' ಸ್ಪರ್ಧೆ ಏರ್ಪಡಿಸಿದ್ದ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಳಿಸುವಂಥ ಮಾನವ ಚಾಲಿತ 'ರೋವರ್‌' ಅಭಿವೃದ್ಧಿ ಸ್ಪರ್ಧೆಯಲ್ಲಿ ರಾಜಸ್ಥಾನದ ಬಿಟ್ಸ್‌ ಪಿಲಾನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಮೊದಲ ಸ್ಥಾನ ಗಳಿಸಿದೆ ಎಂದು ವಿಶ್ವ ವಿದ್ಯಾಲಯದ ಅಧಿಕಾರಿಗಳು ತಿಳಿಸಿದೆ.* ಅಮೇರಿಕಾದ ಅಲಬಾಮದನ ನಾಸಾ ಮಾರ್ಷಲ್ ಸ್ಪೇಸ್ ಪ್ಲೈಟ್ ಸೆಂಟರ್ ನಲ್ಲಿ ಈ ನಾಸಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು,ಮಂಗಳ ಗ್ರಹದ ಮೇಲಿನ ಮಾರ್ಟಿನ್ ಟರೈನ್ ಗಳ (ಬೃಹದಾಕಾರದ ಕುಳಿಗಳನ್ನು ಹೊಂದಿರುವ ಮಂಗಳ ಗ್ರಹದ ಮೇಲ್ಮೈ ಪ್ರದೇಶ) ಮೇಲು ಸಂಚರಿಸಬಲ್ಲ ಸಾಮರ್ಥ್ಯದ ಮಾನವ ಚಾಲಿತ ರೋವರ್ ಗಳನ್ನು ನಾಸಾ ಸ್ಪರ್ಧೆಯಲ್ಲಿ ಸ್ಪರ್ಧಿಸಲಾಯಿತ್ತು.