Job Description: ➤ ಚೀನಾದ ಶಾಂಫೈನಲ್ಲಿ ಇತ್ತೀಚೆಗೆ ಜುಲೈ 10 ರಿಂದ 20 ರವರೆಗೆ ನಡೆದ 67ನೇ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ (IMO 2026) ಸ್ಪರ್ಧೆಯಲ್ಲಿ ಭಾರತದ ಆರೂ ಸ್ಪರ್ಧಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು 7ನೇ ಜಾಗತಿಕ ಸ್ಥಾನವನ್ನು (Unofficial Country Rank) ಪಡೆದುಕೊಂಡಿದೆ.ಅತ್ಯಂತ ಹೆಮ್ಮೆಯ ವಿಷಯವೆಂದರೆ, ಭಾರತ ಗೆದ್ದಿರುವ ಪದಕಗಳಲ್ಲಿ ಕರ್ನಾಟಕದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.➤ ಕರ್ನಾಟಕದ ಹೆಮ್ಮೆಯ ಸಾಧಕರು: ಅಬೆಲ್ ಜಾರ್ಜ್ ಮ್ಯಾಥ್ಯೂ (Abel George Mathew): ಕರ್ನಾಟಕದ ಅಬೆಲ್ ಜಾರ್ಜ್ ಗಣಿತದ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಭೈರವ್ ಮುರುಗನ್ (Bairav Murugan): ಕರ್ನಾಟಕದ ಭೈರವ್ ಮುರುಗನ್ ತಮ್ಮ ಅದ್ಭುತ ಕೌಶಲ್ಯದ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ➤ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ: ಭಾರತೀಯ ತಂಡಕ್ಕೆ ಮುಂಬೈನಲ್ಲಿರುವ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ (HBCSE - TIFR) ತರಬೇತಿ ನೀಡುತ್ತದೆ. ಕಠಿಣವಾದ 'ರಾಷ್ಟ್ರೀಯ ಗಣಿತ ಒಲಿಂಪಿಯಾಡ್' (INMO) ಹಾಗೂ ತರಬೇತಿ ಶಿಬಿರಗಳ ಮೂಲಕ ಅತ್ಯುತ್ತಮ 6 ವಿದ್ಯಾರ್ಥಿಗಳನ್ನು ಅಂತಿಮವಾಗಿ ದೇಶವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗುತ್ತದೆ.➤ ಸತತ 4ನೇ ಬಾರಿಗೆ ಟಾಪ್-10: ಭಾರತವು ಜಾಗತಿಕ ಮಟ್ಟದಲ್ಲಿ ಸತತ ನಾಲ್ಕನೇ ವರ್ಷ Top-10 ದೇಶಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ