Job Description: ➤ ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಚೀನಾ ಮತ್ತು ಪಾಕಿಸ್ತಾನಗಳ ಜಲಾಂತರ್ಗಾಮಿಗಳ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತೀಯ ನೌಕಾಪಡೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ 'ಐಎನ್‌ಎಸ್ ಮಾಲ್ವಾನ್' (INS Malvan) ಆಂಟಿ-ಸಬ್‌ಮರೀನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಯುದ್ಧನೌಕೆಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ➤ ಐತಿಹಾಸಿಕ ಹಿನ್ನೆಲೆ ಮತ್ತು ಹೆಸರಿನ ಮಹತ್ವ: ಶಿವಾಜಿ ಮಹಾರಾಜರ ಗೌರವಾರ್ಥ: ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ನೌಕಾ ಪರಂಪರೆಗೆ ಹಾಗೂ ಮಹಾರಾಷ್ಟ್ರದ ಕರಾವಳಿ ಪಟ್ಟಣ 'ಮಾಲ್ವಾನ್'ಗೆ ಗೌರವ ಸಲ್ಲಿಸಲು ಈ ಯುದ್ಧನೌಕೆಗೆ INS Malvan ಎಂದು ಹೆಸರಿಡಲಾಗಿದೆ. ಧೈಯವಾಕ್ಯ ಹಾಗೂ ಲಾಂಛನ: ಯುದ್ಧನೌಕೆಯ ಲಾಂಛನದಲ್ಲಿ ಧೈರ್ಯ ಮತ್ತು ಜಾಣ್ಮೆಯ ಸಂಕೇತವಾಗಿ 'ವಾಗ್ ನಖ' (ಹುಲಿಯ ಉಗುರು) ಚಿತ್ರವಿದೆ. ಇದರ ಧೈಯವಾಕ್ಯ "Silent Claws" (ಮೌನ ಉಗುರುಗಳು). ➤ ತಾಂತ್ರಿಕ ವಿಶೇಷತೆಗಳು ಮತ್ತು ಸಾಮರ್ಥ್ಯ: ಆಳವಿಲ್ಲದ ನೀರಿನಲ್ಲಿ ಕಾರ್ಯಾಚರಣೆ (Shallow Water Craft): ಕರಾವಳಿಯ ಆಳವಿಲ್ಲದ ನೀರಿನಲ್ಲಿ ಅಡಗಿರುವ ಶತ್ರುಗಳ ಜಲಾಂತರ್ಗಾಮಿಗಳನ್ನು (Submarines) ಪತ್ತೆಹಚ್ಚಿ ಧ್ವಂಸಗೊಳಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಾಟರ್‌ಜೆಟ್ ಪ್ರೊಪಲ್ಷನ್ (Waterjet Propulsion): 396 ರಿಂದ 1,100 ಟನ್ ತೂಕ ಸಾಮರ್ಥ್ಯ ಹೊಂದಿರುವ ಈ ನೌಕೆಯು 'ವಾಟರ್‌ಜೆಟ್ ಪ್ರೊಪಲ್ಷನ್' ತಂತ್ರಜ್ಞಾನ ಹೊಂದಿರುವ ಭಾರತೀಯ ನೌಕಾಪಡೆಯ ಅತಿದೊಡ್ಡ ಯುದ್ಧನೌಕೆಯಾಗಿದೆ. ವೇಗ ಮತ್ತು ಸ್ಟೆಲ್ತ್ ತಂತ್ರಜ್ಞಾನ: ಇದು ಗಂಟೆಗೆ 25 ನಾಟ್ಸ್ (Knots) ವೇಗದಲ್ಲಿ ಚಲಿಸಲಿದ್ದು, ಶತ್ರುಗಳ ರಾಡಾರ್‌ಗೆ ಸುಲಭವಾಗಿ ಸಿಗದ ಸ್ಟೆಲ್ತ್ (Stealth) ಫೀಚರ್‌ಗಳನ್ನು ಹೊಂದಿದೆ. ➤ ನೌಕೆಯಲ್ಲಿರುವ ಪ್ರಮುಖ ಆಯುಧಗಳು: ಆರ್ B-6000 (RBU-6000): ಶತ್ರು ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್. 324 ಮಿಮೀ ಟಾರ್ಪಿಡೋ: ಲೈಟ್‌ವೇಟ್ ಟಾರ್ಪಿಡೋ ಲಾಂಚರ್‌ಗಳು (Lightweight Torpedo Launchers). ಆತ್ಮರಕ್ಷಣೆ ವ್ಯವಸ್ಥೆ: ಟಾರ್ಪಿಡೋ ಡಿಕಾಯ್ ಲಾಂಚರ್, 30 ಮಿಮೀ ನೌಕಾ ಗನ್ ಮತ್ತು 12.7 ಮಿಮೀ ರಿಮೋಟ್ ಕಂಟ್ರೋಲ್ಡ್ ಗನ್‌ಗಳು (RCGS). ಮೈನ್-ಲೇಯಿಂಗ್ ವ್ಯವಸ್ಥೆ: ಕರಾವಳಿ ಭದ್ರತೆಗೆ ಗಣಿ/ಮೈನ್ ಅಳವಡಿಸುವ ತಂತ್ರಜ್ಞಾನ. ➤ ಈ ಯೋಜನೆಯಡಿಯಲ್ಲಿ ಒಟ್ಟು 16 ASW-SWC ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದ್ದು, ಮಾಹೆ-ಕ್ಲಾಸ್ ಸರಣಿಯಲ್ಲಿ ನಿರ್ಮಾಣವಾಗುತ್ತಿರುವ 8 ನೌಕೆಗಳಲ್ಲಿ ಐಎನ್‌ಎಸ್ ಮಾಲ್ವಾನ್ ಎರಡನೆಯದಾಗಿದೆ. ಈ ನೌಕೆಯಲ್ಲಿ 80% ಕ್ಕಿಂತ ಹೆಚ್ಚು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದ್ದು, ನಿರ್ಮಾಣದಲ್ಲಿ ಬಿಇಎಲ್ (BEL), ಮಹೀಂದ್ರಾ ಮತ್ತು ಎಲ್&ಟಿ (L&T) ನಂತಹ ಪ್ರಮುಖ ಭಾರತೀಯ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿವೆ. ಇದು ಭಾರತ ಸರ್ಕಾರದ 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಸಿಕ್ಕ ದೊಡ್ದ ಜಯವಾಗಿದೆ.