Job Description: * ತಮಿಳುನಾಡು,ಕರ್ನಾಟಕ ಮತ್ತು ಕೇರಳದಲ್ಲಿ ಮೊದಲಬಾರಿಗೆ ರಣಹದ್ದು ಗಣತಿಯನ್ನು ಫೆಬ್ರುವರಿ 25 ಮತ್ತು 26 ಕ್ಕೆ ನಡೆಸಲಾಗುವುದು. ಈ ಗಣತಿಯು ಅವುಗಳ ಒಟ್ಟು ಸಂಖ್ಯೆ ಮತ್ತು ವಾಸಸ್ಥಳಗಳ ಬಗ್ಗೆ ಹೆಚ್ಚು ನಿಖರವಾದ ಮಾಹಿತಿ ಪಡೆಯಲು ಅನುಕೂಲ ಮಾಡುತ್ತದೆ. * ನಾಲ್ಕು ಜಾತಿಯ ರಣಹದ್ದುಗಳು ದಕ್ಷಿಣ ಭಾರತದಲ್ಲಿ ಕಂಡುಬರುತ್ತವೆ. ಹಾಗೂ ಇವೆಲ್ಲವೂ ನೀಲಗಿರಿ ಜೈವಿಕ ವಲಯದಲ್ಲಿ ಕೇಂದ್ರೀಕೃತವಾಗಿವೆ.* ತಮಿಳುನಾಡಿನ ಮುದುಮಲೈ, ಸತ್ಯಮಂಗಲಂ ಮತ್ತು ನೀಲಗಿರಿ ಅರಣ್ಯ ವಿಭಾಗದಲ್ಲಿ, ಕರ್ನಾಟಕದ ಬಂಡೀಪುರ, ನಾಗರಹೊಳೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಕೆಲವು ಭಾಗಗಳಲ್ಲಿ ಮತ್ತು ಕೇರಳದ ವಯನಾಡ್‌ನಲ್ಲಿ ಜನಗಣತಿ ನಡೆಸಲಾಗುವುದು.