Job Description: * ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರುಪರಿಚಯ' ಯೋಜನೆಯ ಅಡಿ ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರಿಯ ಉದ್ಯಾನಕ್ಕೆ ಎರಡನೇ ಬ್ಯಾಚ್ ನ ಒಟ್ಟು 12 ಚೀತಾಗಳು ಆಗಮಿಸಿವೆ.* ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಚೀತಾಗಳನ್ನು ಕುನೊ ಉದ್ಯಾನಕ್ಕೆ ಬಿಡುಗಡೆ ಗೊಳಿಸಿದ್ದಾರೆ.* ಪ್ರಸ್ತುತ ಕುನೊ ರಾಷ್ಟ್ರಿಯ ಉದ್ಯಾನದಲ್ಲಿ ಒಟ್ಟು ಚೀತಾಗಳ ಸಂಖ್ಯೆ 20ಕ್ಕೆ ಏರಿಕೆ ಯಾಗಿದೆ * ಸದ್ಯ ಪ್ರಪಂಚದಲ್ಲಿ ಜೀವಂತವಾಗಿರುವ 7,000 ಚೀತಾಗಳ ಪೈಕಿ ಹೆಚ್ಚಿನವು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್‌ ವಾನಾದಲ್ಲಿ ವಾಸಿಸುತ್ತವೆ. ನಮೀಬಿಯಾವು ವಿಶ್ವದಲ್ಲಿಯೇ ಅತಿ ಹೆಚ್ಚು ಚೀತಾಗಳನ್ನು ಹೊಂದಿದೆ.