Job Description: * ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ಮೆಕ್ ಮಹನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ರೇಖೆ ಎಂದು ಅಮೆರಿಕಾ ಹೇಳಿದೆ.* ಈ ವೇಳೆ ಇಂಡೋ-ಪೆಸಿಫಿಕ್‌ಗೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಅಂತಹ ಸಮಯದಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರ ದೇಶಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವುದು ನಿರ್ಣಾಯಕವಾಗಿದೆ ಎಂದು ಸೆನೆಟರ್ ಬಿಲ್ ಹ್ಯಾಗರ್ಟಿ ಹೇಳಿದ್ದಾರೆ.* ಅಮೆರಿಕಾದ ಉಭಯ ಪಕ್ಷೀಯ ಸೆನೆಟ್ ನಲ್ಲಿ ಸೆನೆಟರ್ ಜೆಫ್ ಮರ್ಕ್ಲಿ ಈ ನಿರ್ಣಯವನ್ನು ಪರಿಚಯಿಸಿದ್ದು ಸೆನೆಟರ್ ಜಾನ್ ಕಾರ್ನಿನ್ ನಿರ್ಣಯವನ್ನು ಸಹ ಪ್ರಾಯೋಜಿಸಿದರು.