Job Description: * ಭಾರತದ ಕ್ರಿಕೆಟ್ ಆಟಗಾರ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ರವರು ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಂಕಿಂಗ್ ನಲ್ಲಿ ಮಾರ್ಚ್ 15 ರಂದು ಮತ್ತೆ ಅಗ್ರಸ್ಥಾನ ಪಟ್ಟಿಯಲ್ಲಿ ಮರಳಿದ್ದಾರೆ. ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದು ಅವರ ಕ್ರಮಾಂಕ ಏರಿಕೆಗೆ ಕಾರಣವಾಗಿದೆ.* ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿದ್ದು, ಅಶ್ವಿನ್ ಈ ಪಂದ್ಯದಲ್ಲಿ 91 ರನ್ ನೀಡಿ ಆರು ವಿಕೆಟ್ ಗಳಿಸಿದ್ದರು. ಇದರೊಂದಿಗೆ ಬಾರ್ಡರ್- ಗಾವಸ್ಕರ್ ಸರಣಿಯಲ್ಲಿ ಗರಿಷ್ಠ ವಿಕೆಟ್ (ಒಟ್ಟು 25) ಗಳಿಸಿದ ಬೌಲರ್ ಎನಿಸಿಕೊಂಡಿದ್ದರು.