Job Description: * ಪ್ರತಿ ವರ್ಷ ಮಾರ್ಚ್‌ 24ರಂದು ವಿಶ್ವದಾದ್ಯಂತ ಕ್ಷಯರೋಗ (TB) ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಥೀಮ್-2023 "ನಾವು ಟಿಬಿಯನ್ನು ಕೊನೆಗೊಳಿಸಬಹುದು" (We Can End TB)* ಕ್ಷಯರೋಗ ಮಾನವ ಹಾಗೂ ಪ್ರಾಣಿಗಳನ್ನು ಬಾಧಿಸುವ ಮಾರಕ ರೋಗ. ಇದು 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ.* ಕ್ಷಯರೋಗ ಅಥವಾ ಟಿಬಿಯು ಶ್ವಾಸಕೋಶದ ಒಳಪದರ, ಕೇಂದ್ರ ನರಮಂಡಲ, ಮೂಳೆ ಹಾಗೂ ಕೀಲುಗಳು, ದುಗ್ಧರಸ ಗಂಥ್ರಿಗಳು, ಕಿಬ್ಬೊಟ್ಟೆ, ಮೂತ್ರಪಿಂಡಗಳು, ಯಕೃತ್ತು ಹಾಗೂ ರಕ್ತದ ಮೇಲೂ ಪರಿಣಾಮ ಉಂಟು ಮಾಡಬಹುದು. ಇದು ಕೂದಲು ಹಾಗೂ ಉಗುರನ್ನು ಹೊರತು ಪಡಿಸಿ ಅಕ್ಷರಶಃ ದೇಹದ ಬಹುತೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.* ಕ್ಷಯರೋಗವು ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಈ ರೋಗವು ದೇಹದ ಇತರ ಅಂಗಗಳನ್ನು ಹಾನಿಗೊಳಿಸುತ್ತದೆ. ಇದನ್ನು ಎಕ್ಸ್ಟ್ರಾಪಲ್ಮನರಿ ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲಾಗುತ್ತದೆ.