Job Description: * ಬಾಷ್ ಇಂಡಿಯಾ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಗುರುಪ್ರಸಾದ್ ಮುದ್ಲಾಪುರ್ ಅವರನ್ನು ನೇಮಕ ಮಾಡಲಾಗಿದೆ.* ಬಾಷ್ ಸಮೂಹದ ಹಾಲಿ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಜೂನ್ 30ರಂದು ನಿವೃತ್ತಿ ಆಗಲಿದ್ದು, ಜುಲೈ 1 ರಂದು ಗುರುಪ್ರಸಾದ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗುರುಪ್ರಸಾದ್ ಅವರು ಸದ್ಯ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಆಗಿದ್ದು, ಆ ಹೊಣೆಗಾರಿಕೆಯನ್ನು ಸಹ ನೋಡಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ.* ಬಾಷ್ ಲಿಮಿಟೆಡ್‌ನಲ್ಲಿ ಸದ್ಯ ಕಾರ್ಯನಿರ್ವಾಹಕ ನಿರ್ದೇಶಕ ಆಗಿರುವ ಸಂದೀಪ್ ನೆಲಮಂಗಲ ಅವರನ್ನು ಬಾಷ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆಗಿ ಜುಲೈ 1ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.