Job Description: * ಪ್ರತಿ ವರ್ಷ ಮಾರ್ಚ್ 14 ರಂದು ವಿಶ್ವದಾದ್ಯಂತ ಪೈ ದಿನವನ್ನು ಆಚರಿಸಲಾಗುವುದು. ಈ ದಿನ ಗಣಿತಶಾಸ್ತ್ರದ ಪ್ರಾಮುಖ್ಯತೆ ಆಚರಿಸಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಸೇರುತ್ತಾರೆ.* ಈ ಪದ ವೃತ್ತದ ಅಳತೆಗೆ ಸಂಬಂಧಿಸದ್ದು ಪೈ ನ ಅಂದಾಜು ಮೌಲ್ಯ 3.14159 ಎಂದು ಹೇಳಲಾಗುತ್ತಿದೆ. ಇದರ ದಶಮಾಂಶ ಸಂಖ್ಯೆ ಕೊನೆಗೊಳ್ಳುವುದೇ ಇಲ್ಲ ಮತ್ತು ವಿಜ್ಞಾನದಲ್ಲಿ ಈ ಪದ ಅಥವಾ ಸಂಕೇತ ತುಂಬಾ ಬಳಕೆಯಾಗುತ್ತದೆ. * ಇದನ್ನು ಹೆಚ್ಚಾಗಿ ತ್ರಿಕೋನ ಮತ್ತು ರೇಖಾ ಗಣಿತದ ಲೆಕ್ಕಗಳನ್ನು ಬಿಡಿಸಲು ಬಳಸಲಾಗುತ್ತದೆ. ವೃತ್ತ, ದೀರ್ಘ ವೃತ್ತ, ಗೋಳಗಳ ಮೌಲ್ಯ ಕಂಡು ಹಿಡಿಯಲು ಪೈ ಬೇಕೇ ಬೇಕು. ಈ ಪದವನ್ನು ಕಾಸ್ಕೊಲಾಜಿ, ಧರ್ಮೊಡೈನಾಮಿಕ್ಸ್ ಮೆಕ್ಯಾನಿಕ್ಸ್ ಮತ್ತು, ಎಲೆಕ್ಟೋಮ್ಯಾಗ್ನೆಟೆಕ್ ಕ್ಷೇತ್ರಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಈ ಕುರಿತಾಗಿ ಹಲವಾರು ಕೃತಿಗಳು ಕೂಡಾ ರಚನೆಗೊಂಡಿವೆ.