Job Description: * ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನಿರೀಕ್ಷೆಯಂತೆಯೇ ಸೋಮವಾರ ಡ್ರಾದಲ್ಲಿ ಅಂತ್ಯಕಂಡಿತು. ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಡ್ರಾ ಮಾಡಿಕೊಂಡು, ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯನ್ನು 2-1 ರಲ್ಲಿ ಗೆದ್ದುಕೊಂಡಿತು. * ಟೆಸ್ಟ್ ಕ್ರಿಕೆಟ್‌ನ 'ಸಾಮ್ರಾಟ'ನನ್ನು ನಿರ್ಧರಿಸುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ಗೂ ಭಾರತ ತಂಡವು ಅರ್ಹತೆ ಪಡೆದುಕೊಂಡಿದೆ. * ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಸತತ ನಾಲ್ಕನೇ ಬಾರಿ ಭಾರತ ತಂಡವು ಗೆದ್ದು ಸಾಧನೆ ಮಾಡಿದೆ. ಈ ಹಿಂದೆ 2017 (ಹೋಂ), 2018- 19 (ಅವೇ) ಮತ್ತು 2020 21ರಲ್ಲಿ (ಅವೇ) ನಡೆದಿದ್ದ ಸರಣಿಗಳನ್ನು ಗೆದ್ದುಕೊಂಡಿತ್ತು. 2023ರ ಸರಣಿ ಸೇರಿದಂತೆ ಎಲ್ಲ ಸರಣಿಗಳನ್ನೂ 2-1 ಅಂತರದಲ್ಲಿ ಗೆದ್ದದ್ದು ವಿಶೇಷವಾಗಿದೆ.