Job Description: * ಲಂಡನ್ ನಲ್ಲಿ ಮ್ಯೂಸಿಯಂ ಆಫ್ ಲಂಡನ್ ಡಾಕ್‌ಲ್ಯಾಂಡ್ಸ್ 2003ರಲ್ಲಿ ಸ್ಥಾಪನೆಯಾಗಿದ್ದು, ಮ್ಯೂಸಿಯಂ ಆಫ್ ಲಂಡನ್ ಡಾಕ್‌ಲ್ಯಾಂಡ್ಸ್ ಪ್ರಾಯೋಜಿಸುವ 'ಇಂಡೋ-ಕೆರಿಬಿಯನ್: ಸಂಸ್ಕೃತಿ ಸೃಷ್ಟಿ' ವಸ್ತುಪ್ರದರ್ಶನ ಇದೇ ವರ್ಷದ 2023 ರ ಮೇ ತಿಂಗಳಲ್ಲಿ ನಡೆಯಲಿದೆ. 'ಇಂಡೋ-ಕೆರಿಬಿಯನ್: ಸಂಸ್ಕೃತಿ ಸೃಷ್ಟಿ' ಇದು ಮುಂದಿನ ಪ್ರದರ್ಶನದ ವಸ್ತುವಿಷಯ (ಥೀಮ್) ಆಗಿದೆ.* ಮ್ಯೂಸಿಯಂ ಆಫ್ ಲಂಡನ್ ಡಾಕ್‌ಲ್ಯಾಂಡ್ಸ್ ಸ್ಥಾಪಿಸುವ ಉದ್ದೇಶ : ಥೇಮ್ಸ್ ನದಿಯ ಇತಿಹಾಸ, ಪೋರ್ಟ್ ಆಫ್ ಲಂಡನ್‌ನ ಬೆಳವಣಿಗೆ, ಮತ್ತು ಅಟ್ಲಾಂಟಿಕ್ ಗುಲಾಮ ಪದ್ಧತಿ ವ್ಯವಹಾರದ ಕುರಿತಂತೆ ಬಂದರಿನ ಐತಿಹಾಸಿಕ ಸಂಬಂಧದ ಮೇಲೆ ಬೆಳಕು ಚೆಲ್ಲುವುದು. * ಒಂದು ಬ್ರಿಟಿಷ್ ಮ್ಯೂಸಿಯಂನ ಪ್ರಮುಖ ವಸ್ತು ಪ್ರದರ್ಶನವು ಇಂಡೋ- ಕೆರಿಬಿಯನ್ ಸಮುದಾಯದ ಇತಿಹಾಸದ ಬಗ್ಗೆ ಚರ್ಚಿಸಲಿರುವುದು ಮೊದಲ ಮಹತ್ವದ ಮೈಲಿಗಲ್ಲಾಗಿದೆ.