Job Description: ➤ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನ 'ರಾಜಮಾರ್ಗಯಾತ್ರ' (RajmargYatra) ಮೊಬೈಲ್ ಆ್ಯಪ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗಾಗಿ ಎರಡು ಪ್ರಮುಖ ಹೊಸ ಡಿಜಿಟಲ್ ಸೇವೆಗಳನ್ನು ಬಿಡುಗಡೆ ಮಾಡಿದೆ: ಡಿಜಿಟಲ್ 'ಲೋಕಲ್ ಟೋಲ್ ಪಾಸ್' (Digital Local Toll Pass) 'ಮಾರ್ಗಮಿತ್ರ' ಡಿಜಿಟಲ್ ಸಹಾಯ ಕೇಂದ್ರ (MargMitra Help Centre) ➤ ಪ್ರಮುಖ ಮುಖ್ಯಾಂಶಗಳು: ಡಿಜಿಟಲ್ ಲೋಕಲ್ ಪಾಸ್ ಅರ್ಹತೆ: ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ (20 km) ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳು. ಮೊದಲ ಚಾಲನೆ: ದೆಹಲಿಯ 'ಮುಂಡ್ಕಾ - ಬಕ್ಕರ್‌ವಾಲಾ' ಟೋಲ್ ಪ್ಲಾಜಾ (Urban Extension Road-II). ಮಾರ್ಗಮಿತ್ರ ಭಾಷಾ ಬೆಂಬಲ: ಕನ್ನಡ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಯೋಜಿತ ವ್ಯವಸ್ಥೆಗಳು: ಡಿಜಿಲಾಕರ್ (DigiLocker), ವಾಹನ್ (VAHAN) ಪೋರ್ಟಲ್ ಮತ್ತು GIS (ಭೂಗೋಳ ಮಾಹಿತಿ ವ್ಯವಸ್ಥೆ). ➤ ಡಿಜಿಟಲ್ 'ಲೋಕಲ್ ಟೋಲ್ ಪಾಸ್': ಈ ಹಿಂದೆ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳು ಮಾಸಿಕ ಟೋಲ್ ಪಾಸ್ ಪಡೆಯಲು ಖುದ್ದಾಗಿ ಟೋಲ್ ಪ್ಲಾಜಾಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಆದರೆ ಈಗ ರಾಜಮಾರ್ಗಯಾತ್ರ ಆ್ಯಪ್ ಮೂಲಕ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಆಗಿ ಈ ಪಾಸ್ ಅನ್ನು ಪಡೆದುಕೊಳ್ಳಬಹುದು.ರಾಜಮಾರ್ಗಯಾತ್ರ ಆ್ಯಪ್ ಮೂಲಕ ಡಿಜಿಲಾಕರ್, ವಾಹನ್ ಮತ್ತು ಜಿಐಎಸ್ (GIS) ತಂತ್ರಜ್ಞಾನವನ್ನು ಬಳಸಿ, ಅರ್ಹ ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯ ನಿವಾಸಿಗಳ ವಿಳಾಸ ಹಾಗೂ ವಾಹನ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ ಅನಿಯಮಿತ ಮಾಸಿಕ ಸಂಚಾರಕ್ಕಾಗಿ ಡಿಜಿಟಲ್ ಲೋಕಲ್ ಪಾಸ್ ನೀಡಲಾಗುತ್ತದೆ.➤ 'ಮಾರ್ಗಮಿತ್ರ' (MargMitra) ಸಹಾಯ ಕೇಂದ್ರ: 'ಮಾರ್ಗಮಿತ್ರ' ಎಂಬುದು ರಾಜಮಾರ್ಗಯಾತ್ರ ಆ್ಯಪ್‌ನಲ್ಲಿ ಸಂಯೋಜಿತಗೊಂಡಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂವಾದಾತ್ಮಕ ಡಿಜಿಟಲ್ ಸಹಾಯ ವೇದಿಕೆಯಾಗಿದೆ.ಪ್ರಮುಖ ಕಾರ್ಯಗಳು: multilingual support: ಕನ್ನಡ ಸೇರಿದಂತೆ ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾರತೀಯ ಭಾಷೆಗಳಲ್ಲಿ ಟೈಪ್ ಮಾಡುವ ಅಥವಾ ಮಾತನಾಡುವ ಮೂಲಕ ಮಾಹಿತಿ ಪಡೆಯಬಹುದು. ಏಕಕವಾಟ ಸೇವೆ: FASTag ರೀಚಾರ್ಜ್, KYC ವಿವರಗಳು, ರಿಫಂಡ್ ಸ್ಥಿತಿ, ವಾರ್ಷಿಕ/ಸ್ಥಳೀಯ ಪಾಸ್ ಮಾಹಿತಿಯನ್ನು ಒದಗಿಸುತ್ತದೆ. ಕುಂದುಕೊರತೆ ಪರಿಹಾರ (Grievance Redressal): ಹೆದ್ದಾರಿ ಸಂಚಾರಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು ಮತ್ತು ಅದರ ಪ್ರಗತಿಯನ್ನು (Status) ರಿಯಲ್-ಟೈಮ್‌ನಲ್ಲಿ ವೀಕ್ಷಿಸಬಹುದು. ರಸ್ತೆ ಸುರಕ್ಷತೆ: ಅಪಘಾತಗಳು, ಸ್ಥಗಿತಗೊಂಡ ವಾಹನಗಳು ಅಥವಾ ರಸ್ತೆ ಒತ್ತುವರಿಯ ಬಗ್ಗೆ ನೇರವಾಗಿ ವರದಿ ಮಾಡಲು ಅವಕಾಶವಿದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ