Job Description: * ಬ್ರಿಟನ್ ವೇಲ್ಸ್ ನ ಸರಕಾರಿ ಆರೋಗ್ಯ ಸಂಸ್ಥೆಯೊಂದರಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 900 ಭಾರತೀಯ ನರ್ಸ್ ಗಳನ್ನು ನೇಮಿಸಿಕೊಳ್ಳುವ ನಿರ್ಧಾರವನ್ನು ಬ್ರಿಟನ್ ಸರ್ಕಾರ ತೆಗೆದುಕೊಂಡಿದ್ದು, ಇವರಲ್ಲಿ ಕೆಲವರು ಭಾರತೀಯ ನರ್ಸ್ ಗಳಿದ್ದು ವಿಶೇಷವಾಗಿ ಕೇರಳದ ನರ್ಸ್ ಗಳು ಕೂಡ ಆಗಿರುತ್ತಾರೆ. * ಭಾರತದ ಜೊತೆಗೆ ಫಿಲಿಫೈನ್ಸ್, ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಿಂದಲೂ ನರ್ಸ್ ಗಳ ನೇಮಕ ಮಾಡಿಕೊಳ್ಳಬೇಕಿದೆ, ಮತ್ತು ಸ್ವಾನ್ಸಿ ಬೇ ವಿಶ್ವವಿದ್ಯಾಲವು ಆರೋಗ್ಯ ಮಂಡಳಿಯ ಹಣಕಾಸು ವರ್ಷದಲ್ಲಿ 350 ವಿದೇಶಿ ನರ್ಸ್ ಗಳನ್ನು ನೇಮಕಮಾಡಿಕೊಳ್ಳಬೇಕಿದ್ದು, ಇದಕ್ಕೆ 47.99 ಕೋಟಿ ವಿನಿಯೋಗಿಸಲಾಗಿದೆ ಎಂದು ಬಿಬಿಸಿಯ ಲೋಕಲ್ ಡೆಮಾಕ್ರಸಿ ರಿಪೋರ್ಟಿಂಗ್ ಸರ್ವಿಸ್ ವರದಿಯನ್ನು ನೀಡಿದೆ.* ಬ್ರಿಟನ್ ಗೆ ನೇಮಕವಾದ ನರ್ಸ್ ಗಳಿಗೆ ಉನ್ನತ ಮಟ್ಟದ ತರಬೇತಿ ನೀಡುವದರ ಜೊತೆಗೆ ಅವರಿಗೆ ಪ್ರಾರಂಭದ ವೇತನವಾಗಿ 27.61 ಲಕ್ಷ (27,055 ಪೌಂಡ್ಸ್) ನೀಡಲಾಗುವುದು ಎಂದು ಬ್ರಿಟನ್ ನ ಆರೋಗ್ಯ ಮಂಡಳಿ ನಿರ್ಧರಿಸಿದೆ.