* ಭಾರತದ ಕಲಬೆರಕೆಯ ಕೆಮ್ಮಿನ ಔಷಧಿಗಳು ತಯಾರಿಕೆಯ ಕುರಿತು ವಿಶ್ವ ಅರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಓ) ಮೂರೂ ಬಾರಿ ಎಚ್ಚರಿಕೆ ನೀಡಿದ್ದು, ಕಲಬೆರಕೆಯ ಕೆಮ್ಮಿನ ಔಷಧಿಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮುನ್ನ ಸರ್ಕಾರೀ ಮಾನ್ಯತೆಯ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಔಷದ ತಯಾರಕರಿಗೆ ಸೂಚನೆ ನೀಡಿದೆ.* ವೇದೇಶಿ ವ್ಯಾಪಾರ ಮಹಾನಿರ್ದೇಶನಾಲಯವು ರಫ್ತು ನೀತಿಗಳನ್ನು ಪರಿಷ್ಕರಿಸಿದೆ, ಕೆಮ್ಮಿನ ಸಿರಪ್ಗಳನ್ನೂ ರಫ್ತು ಮಾಡುವ ಮುನ್ನ ಸರ್ಕಾರ ಗುರುತಿಸಿರುವ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಜೂನ್ 1 ರಿಂದ ಹೊಸ ನೀತಿ ಜಾರಿಗೆ ಬರಲಿದೆ.