* ವಿದ್ಯುತ ಚಾಲಿತ ವಾಹನಗಳ ತಯಾರಿಕೆ, ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯವು ಫೇಮ್ -2 ಯೋಜನೆ ಅಡಿಯಲ್ಲಿ ಇವಿ ಸಹಾಯಧನವನ್ನು ನೀಡುತ್ತಿತ್ತು.* ಫೇಮ್ -2 ಯೋಜನೆ ಅಡಿಯಲ್ಲಿ ಇವಿ ಮತ್ತು ದ್ವಿಚಕ್ರ ವಾಹನಗಳಿಗೆ ನೀಡುತ್ತಿದ್ದ ಶೇ 40 ರಷ್ಟು ಸಹಾಯಧನವನ್ನು ಜೂನ್ 1 ರಿಂದ ಅನ್ವಯವಾಗುವಂತೆ ಶೇ 15 ಕ್ಕೆ ಇಳಿಸಿದ ಕೇಂದ್ರ ಸರ್ಕಾರದ ಕ್ರಮವು ಉದ್ಯಮವನ್ನು ಬಾಧಿಸಲಿದೆ ಎಂದು ವಿದ್ಯುತ ಚಾಲಿತ ವಾಹನಗಳ ತಯಾರಕರ ಸೊಸೈಟಿ (ಎಸ್ಎಂಇವಿ) ತಿಳಿಸಿದೆ.