Job Description: * ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 25 ರಂದು ತಿರುವನಂತಪುರ ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ, ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ಗೆ ಚಾಲನೆ ನೀಡಿದರು ಹಾಗೂ 'ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತದೆ ಎಂದು ಹೇಳಿದ್ದಾರೆ.* ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ, 'ಕೊಚ್ಚಿ ವಾಟರ್ ಮೆಟ್ರೊ' ಉದ್ಘಾಟಿಸುವದರ ಜೊತೆಗೆ ಡಿಂಡಿಗಲ್- ಪಳನಿ ಪಾಲಕ್ಕಾಡ್‌ ರೈಲು ಮಾರ್ಗದ ವಿದ್ಯುದೀಕರಣ, ದೇಶದ ಮೊದಲ 'ಡಿಜಿಟಲ್ ಸೈನ್ಸ್ ಪಾರ್ಕ್‌' ಸೇರಿದಂತೆ 33,200 ಕೋಟಿಗೂ ಅಧಿಕ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.