* ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 25 ರಂದು ಕೊಚ್ಚಿಯಲ್ಲಿ 71,136 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ “ಕೊಚ್ಚಿ ವಾಟರ್ ಮೆಟ್ರೊ' ಸೇವೆಗೆ ಚಾಲನೆ ನೀಡಿದರು.* ಕೊಚ್ಚಿ ಹಾಗೂ ಸುತ್ತಮುತ್ತ ಇರುವ 10 ದ್ವೀಪಗಳಿಗೆ 78 ಎಲೆಕ್ನಿಕಲ್‌ ದೋಣಿಗಳ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ 'ಕೊಚ್ಚಿ ವಾಟರ್ ಮೆಟ್ರೊ'. ಇದರ ಮಾರ್ಗದಲ್ಲಿ ಒಟ್ಟು 38 ಟರ್ಮಿನಲ್ ಗಳನ್ನು ನಿರ್ಮಿಸಲಾಗಿದ್ದು, ಕೊಚ್ಚಿ ವಾಟರ್ ಮೆಟ್ರೊ ಯೋಜನೆಯನ್ನು ಕೇರಳ ಸರ್ಕಾರ ಹಾಗೂ ಜರ್ಮನಿ ಮೂಲದ KFW ಸಂಸ್ಥೆ ಜಂಟಿಯಾಗಿ ನಿರ್ಮಿಸಿವೆ.