*  ಕೇಂದ್ರ ಸರ್ಕಾರವು ಸೋಮವಾರ 'ಮೇರಿ ಲೈಫ್‌' (ನನ್ನ ಬದುಕು) ಮೊಬೈಲ್‌ ಆಯಪ್‌ ಅನಾವರಣಗೊಳಿಸಿದೆ.* ಪ್ರಧಾನಿ ನರೇಂದ್ರ ಮೋದಿಯವರ 'ಮಿಷನ್‌ ಲೈಫ್‌' ಆಯಪ್‌ನಿಂದ ಪ್ರೇರಣೆಗೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೇರಿ ಲೈಫ್‌ನಲ್ಲಿನ 'ಲೈಫ್‌' ಎಂಬ ಪದವು ಪರಿಸರಕ್ಕಾಗಿ ಜೀವನಶೈಲಿ ಎಂಬ ಅರ್ಥವನ್ನು ಕೊಡುತ್ತದೆ.* ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ 'ಮೇರಿ ಲೈಫ್‌' (ನನ್ನ ಬದುಕು) ಮೊಬೈಲ್‌ ಆಯಪ್‌ ಅನಾವರಣಗೊಳಿಸಿದೆ.