* ನೇಪಾಳದ ಶೆರ್ಪಾ ಮಾರ್ಗದರ್ಶಿಯಾದ 46 ವಯಸ್ಸಿನ ಪಸಂಗ್ ದವಾ ಅವರು ಬರೋಬ್ಬರಿ 26 ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆ ನಿರ್ಮಿಸಲಾಗಿದ್ದು, ಈ ಮೂಲಕ ಮೇ 14 ರಂದು ಮೌಂಟ್ ಎವರೆಸ್ಟ್ ನ 29,032 ಅಡಿ ಎತ್ತರವನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ.* ಪಸಂಗ್ ದವಾ ರವರು ಹಂಗೇರಿಯ ಪರ್ವತಾರೋಹಿಯೊಂದಿಗೆ ಮೌಂಟ್ ಎವರೆಸ್ಟ್‌ನ ತುತ್ತತುದಿ ತಲುಪಿದ್ದಾರೆ ಎಂದು ಆಯೋಜಕ ಸಂಸ್ಥೆ ಇಮ್ಯಾಜಿನ್ ನೇಪಾಳ ಟ್ರೆಕ್ಸ್ ಸಂಸ್ಥೆಯು ತಿಳಿಸಿದೆ.* 1998ರಲ್ಲಿ ಇವರು ಮೊದಲ ಬಾರಿಗೆ ಎವರೆಸ್ಟ್ ಏರಿದ್ದರು. 1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಪರ್ವತಾರೋಹಿ ಎಡ್ಕಂಡ್ ಹಿಲರಿ, ಮಾರ್ಗದರ್ಶಕ ತೇನ್ ಸಿಂಗ್ ನೋರ್ಗೆ ಮೌಂಟ್ಎ ವರೆಸ್ಟ್ ಏರಿದ್ದರು.