* ಶ್ರವಣಬೆಳಗೊಳದ ಚಾರು ಕೀರ್ತಿಭಟ್ಟಾರಕ ಸ್ವಾಮೀಜಿರವರು ಎಸ್ ಡಿಜಿಎಂಎ ಮ್ಯಾನೇಜ್ ಮೆಂಟ್ ಸಮಿತಿಯ ಪರವಾಗಿ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾದ 2022 ನೇ ಸಾಲಿನ ಚಾವುಂಡರಾಯ ಪ್ರಶಸ್ತಿಗೆ ಲೇಖಕ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಕೆ.ಇ.ರಾಧಾಕೃಷ್ಣ ರವರು 'ಚಾವುಂಡರಾಯ ಪ್ರಶಸ್ತಿ' ಗೆ ಭಾಜನರಾಗಿದ್ದಾರೆ.* ಈ ಚಾವುಂಡರಾಯ ಪ್ರಶಸ್ತಿಯು 30 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ತಾಂಬೂಲ ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ರವರು ತಿಳಿಸಿದ್ದಾರೆ.* ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ರವರು ರಚಿಸಿದ ಸಂಸ್ಕೃತದ ಜೈನ ಮಹಾಪುರಾಣವನ್ನು ಶಾಂತಿರಾಜ ಶಾಸ್ತ್ರಿಯವರು ಕನ್ನಡಕ್ಕೆ ಅನುವಾದಿಸಲಾಗಿದ್ದು, ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ಈ ಕೃತಿಗಳನ್ನು ರಾಧಾಕೃಷ್ಣ ರವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ ಎಂದು ಈ ಕೃತಿಗೆ ಪ್ರಶಸ್ತಿ ದೊರಕಿದೆ ಎಂದು ತಿಳಿಸಿದ್ದಾರೆ.