Job Description: * ನಿರ್ಮಾಣವಾಗುತ್ತಿದ್ದ ಜಗತ್ತಿನ ಅತೀ ಎತ್ತರದ ರೈಲ್ವೆ ಸೇತುವೆಯು ಜಮ್ಮು ಕಾಶ್ಮೀರದ ಚೀನಾಬ್‌ ನದಿಯ ಮೇಲೆ ನಿರ್ಮಾಣವಾಗಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ.* ಜಗತ್ತಿನ ಅತ್ಯಂತ ಎತ್ತರದ ರೈಲು ಸೇತುವೆ ಎಂಬ ಖ್ಯಾತಿ ಹೊಂದಿರುವ ಜಮ್ಮು-ಕಾಶ್ಮೀರದ ಚಿನಾಬ್ ಸೇತುವೆಯಲ್ಲಿ ಮಂಗಳವಾರ ಫೆ.22 ರಂದು ರೈಲುಹಳಿ ಅಳವಡಿಸುವ ಕಾರ್ಯ ಶುರುವಾಗಿದೆ. * ಈ ಸೇತುವೆ ನದಿಯಿಂದ 359 ಮೀಟರ್ ಎತ್ತರ ಇದ್ದು, 1.3 ಕಿಲೋಮೀಟರ್ ಉದ್ದ ಇದೆ. ಈ ಸೇತುವೆ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 35 ಮೀಟರ್ ಎತ್ತರ ಇದೆ. * ಈ ಸೇತುವೆ ಉಧಮ್ ಪುರ- ಶ್ರೀನಗರ-ಬಾರಾಮುಲ್ಲಾರೈಲ್ ಲಿಂಕ್ (ಯುಎಸ್‌ಬಿಆ‌ ಎಲ್) ಯೋಜನೆಯಡಿ ನಿರ್ಮಾಣವಾಗುತ್ತಿದ್ದು ಒಟ್ಟು 272 ಕಿಲೋಮೀಟರ್‌ನಲ್ಲಿ ಈಗಾಗಲೇ 161 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಈ ಕಟ್ರಾ-ಬಾರಾಮುಲ್ಲಾ 111 ಕಿಲೋಮೀಟರ್ ಕಾಮಗಾರಿಯಲ್ಲಿ ಒಟ್ಟು 37 ಸೇತುವೆ (26 ಬೃಹತ್,11 ಕಿರು),35 ಸುರಂಗಗಳು ಇರಲಿದೆ.