Job Description: * ಆಸ್ಟ್ರೇಲಿಯಾ ದಲ್ಲಿ ಜನೆವರಿ 16 ರಿಂದ ಓಪನ್ ಟೆನಿಸ್ ಟೂರ್ನಿ ನಡೆಯಲಿದ್ದು, ದಿಗ್ಗಜ ಆಟಗಾರ ರೋಜರ್ ಫೆಡರರ್ ನಿವೃತ್ತಿಯಾದ ನಂತರದ ಮೊದಲ ಪಂದ್ಯ ಇದಾಗಿದೆ. ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಅನುಭವಿ ಆಟಗಾರರಾದ ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ರವರ ಮೇಲೆ ಎಲ್ಲರು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಡಾಲ್ ರವರು ಕಳೆದ ವರ್ಷ 2022 ರಲ್ಲಿ ಭಾರತದಲ್ಲಿ ಚಾಂಪಿಯನ್ ಆಗಿದ್ದರು. * 2023ರ ಮೊದಲ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿ ಆಸ್ಪ್ರೇಲಿಯನ್‌ ಓಪನ್‌ಗೆ ಸೋಮವಾರ ಚಾಲನೆ ದೊರೆಯಲಿದೆ. 22 ಗ್ರ್ಯಾನ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದು, ಕೋವಿಡ್‌ ಲಸಿಕೆ ಪಡೆಯದೆ ಕಳೆದ ವರ್ಷ ಟೂರ್ನಿಗೆ ಗೈರಾಗಿದ್ದ ನೋವಾಕ್‌ ಜೋಕೋವಿಕ್ ಈ ಬಾರಿ ಸ್ಪರ್ಧಿಸಲಿದ್ದಾರೆ. * 21 ಗ್ರ್ಯಾನ್‌ ಸ್ಲಾಂ ಗೆದ್ದಿರುವ ಜೋಕೋವಿಕ್, ನಡಾಲ್‌ರ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಈ ಇಬ್ಬರೂ ಪ್ರತ್ಯೇಕ ವಿಭಾಗಗಳಲ್ಲಿದ್ದು, ಮುಖಾಮುಖಿಯಾಗುವುದಿದ್ದರೆ ಫೈನಲ್‌ನಲ್ಲಷ್ಟೇ ಆಗಬೇಕಿದೆ.* ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ. ಒಟ್ಟು 3 ಗ್ರ್ಯಾನ್‌ ಸ್ಲಾಂ ಗೆದ್ದಿರುವ 21ರ ಇಗಾ, ಕಳೆದ ವರ್ಷ ಸತತ 37 ಪಂದ್ಯಗಳನ್ನು ಗೆದ್ದಿದ್ದರು.* ಭಾರತದ ದಿಗ್ಗಜೆ ಸಾನಿಯಾ ಮಿರ್ಜಾ ವೃತ್ತಿಬದುಕಿನ ಕೊನೆಯ ಗ್ರ್ಯಾನ್‌ ಸ್ಲಾಂ ಆಡಲಿದ್ದಾರೆ. ಮುಂದಿನ ತಿಂಗಳು ನಿವೃತ್ತಿ ಪಡೆಯಲಿರುವ ಸಾನಿಯಾ, ಈ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಕಜಕಸ್ತಾನದ ಆ್ಯನಾ ದನಿಲಿನಾ ಜೊತೆ ಕಣಕ್ಕಿಳಿಯಲಿದ್ದಾರೆ.* ಅವಧಿ - ಜನೆವರಿ 16 ರಿಂದ 29 * ಸ್ಥಳ - ಮೆಲ್ಬೋರ್ನ್ * ಪ್ರಮುಖ ಅಂಕಣ - ರಾಡ್ ಲಿವರ್ ಅರೇನಾ, ಮಾರ್ಗರೆಟ್ ಕೋರ್ಟ್ ಅರೇನಾ * ಹಾಲಿ ಚಾಂಪಿಯನ್ - ರಫೆಲ್ ನಾಡಾಲ್ (ಸ್ಪೇನ್ - ಪುರುಷರ ವಿಭಾಗ), ಆಶ್ಲೇ ಬಾರ್ಟಿ (ಆಸ್ಟ್ರೇಲಿಯಾ - ಮಹಳೆಯರ ವಿಭಾಗ)