Job Description: * ಮೂರನೇ ಏಕದಿನ ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಭಾರತ ವಿಶ್ವದಾಖಲೆ ನಿರ್ಮಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರ ಅತ್ಯಧಿಕ ಅಂತರದ ಗೆಲುವು ಎಂಬ ಹೆಗ್ಗಳಿಕೆಗೆ ಈಗ ಭಾರತ ಪಾತ್ರವಾಗಿದೆ.* ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌ ಶತಕದಾಟ ನಂತರ ಸಿರಾಜ್‌ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ ಕೇವಲ 73 ರನ್‌ಗಳಿಗೆ ಪತನವಾಯಿತು. ಪಂದ್ಯವನ್ನು 317 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.* ಗೆಲ್ಲಲು 391 ರನ್‌ಗಳ ಕಠಿಣ ಗುರಿಯನ್ನು ಪಡೆದ ಲಂಕಾ ಆರಂಭಿದಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಪತನವಾಗಿ ಸೋಲನ್ನು ಒಪ್ಪಿಕೊಂಡಿತು.