Job Description: * 'ವಾಶಿಂಗ್ಟನ್ ಪೋಸ್ಟ್' ವರದಿಯು ಸೋರಿಕೆಯಾಗಿರುವ ಅಮೆರಿಕ ಗುಪ್ತಚರ ದಾಖಲೆಗಳ ಪ್ರಕಾರ, ತನ್ನ ಶಸ್ತ್ರಾಸ್ತ್ರ ಪೂರೈಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ರಷ್ಯಾಕ್ಕೆ 40,000 ರಾಕೆಟ್‌ಗಳನ್ನು ರಹಸ್ಯವಾಗಿ ಪೂರೈಸಲು ಈಜಿಪ್ಟ್ ಯೋಜಿಸಿದೆ.* ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ರವರು ರಷ್ಯಾಕ್ಕೆ ಫಿರಂಗಿ ಗುಂಡುಗಳು ಹಾಗೂ ಗನ್ ಪೌಡರ್ ಒದಗಿಸುವ ವಿಷಯದಲ್ಲಿ ತನ್ನ ಉನ್ನತ ಮಿಲಿಟರಿ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ, ಪಾಶ್ಚಿಮಾತ್ಯರ ಜತೆ ಸಮಸ್ಯೆಯಾಗುವುದನ್ನು ತಪ್ಪಿಸಲು ಈ ಯೋಜನೆಯ ಬಗ್ಗೆ ರಹಸ್ಯ ಕಾಯ್ದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.