Job Description: * ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಏಪ್ರಿಲ್ 12 ರಂದು ಚಾಲನೆ ನೀಡಿದ್ದಾರೆ.* ಈ ರೈಲು ರಾಜಸ್ಥಾನ ಹಾಗೂ ದೆಹಲಿಯಿಂದ ಅಜ್ಮಿರ್ ನಗರವನ್ನು ಸಂಪರ್ಕಿಸಲಿದೆ. ಈ ರೈಲಿನ ವೇಗವು ದೆಹಲಿ ಕಂಟೋನ್ಮಂಟ್ ಹಾಗೂ ಅಜ್ಮಿರ್ ನಿಲ್ದಾಣಗಳ ನಡುವಿನ ಪ್ರಯಾಣದ ಅವಧಿಯು ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತಲೂ ಒಂದು ತಾಸಿನ ಮುಂಚೆ ತಲುಪುತ್ತದೆ.* ರಾಜಸ್ಥಾನದ ವಂದೇ ಭಾರತ್ ರೈಲಿನ ಚಾಲನೆಯೊಂದಿಗೆ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕದಲ್ಲಿ ಸುಧಾರಣೆಯಾಗಲಿದ್ದು, ಸಾಮಾಜಿಕ- ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.