Job Description: * ರಾಜ್ಯಗಳ ಹುಲಿ ಸಂರಕ್ಷಿತಾರಣ್ಯಗಳ ಪರಿಣಾಮಕಾರಿ ನಿರ್ವಹಣೆ ಮೌಲ್ಯಮಾಪನದಲ್ಲಿ (ಎಂಇಇ) ಬಂಡೀಪುರ ಸಂರಕ್ಷಿತಾರಣ್ಯವು 2ನೇ ಸ್ಥಾನ ಪಡೆದಿದೆ.* ಏಪ್ರಿಲ್ 09 ರಂದು MEE ವರದಿ ಬಿಡುಗಡೆಯಾಗಿದ್ದು, ಉತ್ತಮ ಸಾಧನೆ ಮಾಡಿರುವ 12 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಂಡೀಪುರವು (ಶೇ 93.18) ಮಧ್ಯಪ್ರದೇಶದ ಸಾತ್ಪುರ ದೊಂದಿಗೆ ದ್ವಿತೀಯ ಸ್ಥಾನ ಹಂಚಿ ಕೊಂಡಿದೆ. * ಮೊದಲ ಸ್ಥಾನವನ್ನು ಕೇರಳದ ಪೆರಿಯಾರ್ ಹುಲಿ ಸಂರಕ್ಷಿ- ತಾರಣ್ಯವು (ಶೇ 94.38) ಪಡೆದಿದೆ. ರಾಜ್ಯದ ನಾಗರಹೊಳೆ (ಶೇ 92.42) 4 ನೇ ಸ್ಥಾನ, ಬಿಳಿಗಿರಿ ರಂಗನ ಬೆಟ್ಟ (ಶೇ 91.67) 6, ' ಭದ್ರಾ (ಶೇ 90.91) 7 ನೇ ಸ್ಥಾನ, ಕಾಳಿ ಹುಲಿ ಸಂರಕ್ಷಿತಾರಣ್ಯವು (ಶೇ 90.30) 10ನೇ ಸ್ಥಾನ ಗಳಿಸಿವೆ.