Job Description: * ಕರ್ನಾಟಕ ನೌಕಾ ಪ್ರದೇಶದ ನೂತನ ಕಮಾಂಡಿಂಗ್ ಫ್ಲಾಗ್ ಆಫೀಸರ್ ಆಗಿ ರಿಯರ್ ಅಡ್ಮಿರಲ್ ಕೆಎಂ ರಾಮಕೃಷ್ಣನ್ ಅವರು ನೇಮಕಗೊಂಡಿದ್ದು ಏಪ್ರಿಲ್ 10 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.* ಕಾರವಾರದ ಅರ್ಗಾದ ನೌಕಾನೆಲೆಯಲ್ಲಿನ ಘಟಕಗಳು ಸೇರಿದಂತೆ ಕರ್ನಾಟಕದ ಎಲ್ಲಾ ಸಂಸ್ಥೆಗಳು, ಘಟಕಗಳ ಕಾರ್ಯಾಚರಣೆಗಳು ಮತ್ತು ಆಡಳಿತದ ಜವಾಬ್ದಾರಿಯನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ಹೊಂದಿರುತ್ತಾರೆ.* ರಿಯ‌ರ್ ಅಡ್ಮಿರಲ್ ಕೆಎಂ ರಾಮಕೃಷ್ಣನ್, ಅವರು 1991ರ ಜನವರಿ 01 ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಹಣಾ ಶಾಖೆಯಲ್ಲಿ ನಿಯುಕ್ತಿಗೊಳ್ಳುವ ಮೂಲಕ ಸೇವೆಗೆ ಸೇರಿದರು.