* ಕೆಲವೇ ವರ್ಷಗಳ ಹಿಂದೆ ಧೂಳಾಪುರ, ಬಿಸಿಲೂರು ಎಂದು ಕರೆಯಿಸಿಕೊಳ್ಳುತ್ತಿದ್ದ ವಿಜಯಪುರ ಈಗ ಕರ್ನಾಟಕದಲ್ಲಿಯೇ ಪರಿಶುದ್ಧವಾದ ಗುಣಮಟ್ಟದ ವಾತಾವರಣವಿರುವ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಆಕ್ರಮಿಸಿಕೊಂಡಿದೆ.* ವಾಯುಗುಣಮಟ್ಟ ಸೂಚ್ಯಂಕದ(ಎಕ್ಯೂಐ) ಪಟ್ಟಿ ಬಿಡುಗಡೆಯಾಗಿದ್ದು ಎಕ್ಯೂಐ 500 ದಾಟಿರುವ ರಾಜಧಾನಿ ದೆಹಲಿ ವಾಯುಮಾಲಿನ್ಯದಿಂದಾಗಿ ನಲುಗಿದೆ.* ಕರ್ನಾಟಕದ ನಗರಗಳಲ್ಲಿ ವಿಜಯಪುರ ಎಕ್ಯೂ ಐ ಕೇವಲ 37ಎಂದು ದಾಖಲಾಗುವ ಮೂಲಕ ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ.* ಬಾಗಲಕೋಟೆ ದ್ವಿತೀಯ ಹಾಗೂ ಚಾಮರಾಜನಗರ ತೃತೀಯ ಸ್ಥಾನದಲ್ಲಿವೆ. 96 ಸೂಚ್ಯಂಕ ಹೊಂದಿರುವ ಬೆಂಗಳೂರು 138 ಸೂಚ್ಯಂಕ ಹೊಂದಿರುವ ಹುಬ್ಬಳ್ಳಿ ಸಮಾಧಾನಕರ ವಾತಾವರಣ ಹೊಂದಿದೆ.