* ಹವಾಮಾನ ಬದಲಾವಣೆ, ಬಡತನ ಹಾಗೂ ಹಸಿವು ನಿವಾರಣೆಗೆ ಜಾಗತಿಕ ಒಪ್ಪಂದ, ಸಂಘರ್ಷ ಪೀಡಿತ ಗಾಜಾಗೆ ಹೆಚ್ಚಿನ ನೆರವು, ಮಧ್ಯಪ್ರಾಚ್ಯ ಹಾಗೂ ಉಕ್ರೇನ್-ರಷ್ಯಾ ಯುದ್ಧ, ಆರ್ಥಿಕ ಅಸಮಾನತೆಯಂತಹ ನಿರ್ಣಾಯಕ ಜಾಗತಿಕ ಸಮಸ್ಯೆಗಳನ್ನು ಕೊನೆಗಾಣಿಸಲು ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.* ಅಮೆರಿಕ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಕೈಗೊಳ್ಳಬಹುದಾದ ಹೊಸ ವಿದೇಶಿ ನೀತಿ ನಿಯಮಗಳ ಬಗ್ಗೆ ಸ್ಪಷ್ಟತೆ ಸಿಗದ ಕಾರಣ ಹಲವು ವಿಷಯಗಳ ಕುರಿತು ವಿಶ್ವ ನಾಯಕರ ಮನವೊಲಿಸುವಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲೂಲಾ ಡಿ'ಸಿಲ್ವಾ ವಿಫಲರಾದರು ಎಂದು ಎಂದು ಜಾಗತಿಕ ಮಾಧ್ಯಮಗಳು ವಿಶ್ಲೇಷಿಸಿದೆ.* ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ, ಕೋಟ್ಯಧಿಪತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಪ್ರಸ್ತಾಪಗಳಿಗೆ ಶೃಂಗಸಭೆಯಲ್ಲಿ ಒಮ್ಮತಕ್ಕೆ ಬರಲು ವಿಶ್ವನಾಯಕರು ವಿಫಲವಾದರು. ಕೋಟ್ಯಧೀಶರಿಗೆ ತೆರಿಗೆ ವಿಧಿಸುವೆ ನಿರ್ಣಯಕ್ಕೆ ಅರ್ಜೆಂಟಿನಾ ಸೇರಿ ಹಲವು ದೇಶಗಳು ವಿರೋಧಿಸಿದ್ದು, ತೆರಿಗೆ ಪ್ರಸ್ತಾಪ ವಿಚಾರದಲ್ಲಿ ಒಮ್ಮತಕ್ಕೆ ಬರಲು ಜಿ20 ಶೃಂಗಸಭೆ ವಿಫಲವಾಯಿತು.* ವಿಶ್ವನಾಯಕರು ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿದರು. ಗಾಜಾಗೆ ಹೆಚ್ಚಿನ ಮಾನವೀಯ ನೆರವು ನೀಡುವ ನಿರ್ಣಯಕ್ಕೆ ಸಮ್ಮತಿಸಿದರು.* ಜಾಗತಿಕ ಹಸಿವು ನಿವಾರಣೆಗೆ  ಮತ್ತು ಬಡತನ ನಿವಾರಣೆಗೆ ಬ್ರೆಜಿಲ್ ಅಧ್ಯಕ್ಷರ ಜಾಗತಿಕ ಮೈತ್ರಿ ರಚನೆ ಪ್ರಸ್ತಾವನೆಗೆ ಭಾರತ ಸೇರಿದಂತೆ 80 ದೇಶಗಳು ಸಹಿ ಹಾಕಿದವು.* ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವ 733 ಮಿಲಿಯನ್ ಜನರ ಸಂಕೇತವಾಗಿ ಮರಳಿನಲ್ಲಿ ರೂಪಿಸಿದ್ದ 733 ಖಾಲಿ ಪ್ಲೇಟ್ ಕಲಾಕೃತಿಗಳು ಗಮನ ಸೆಳೆದವು.* 2030 ರ ವೇಳೆಗೆ 500 ಮಿಲಿಯನ್ ಜನರಿಗೆ ಆಹಾರ ನೀಡುವ ಗುರಿಯೊಂದಿಗೆ ಲೂಲಾ ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಪ್ರಾರಂಭಿಸಿದರು.